ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೌಲ್ವಿಗಳು ಇಂದು ಭಾರತಕ್ಕೆ ವಾಪಸ್

ಸೋಮವಾರ, 20 ಮಾರ್ಚ್ 2017 (09:23 IST)
ದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾದ ಮುಖ್ಯಸ್ಥ ಸೇರಿದಂತೆ ಪಾಕಿಸ್ತಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಇಬ್ಬರು ಮೌಲ್ವಿಗಳು ಇಂದು ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ.
 

ಹಜರತ್ ನಿಜಾಮುದ್ದೀನ್ ದರ್ಗಾ ಮುಖ್ಯಸ್ಥ ಸೈಯದ್ ಆಸಿಫ್ ನಿಜಾಮಿ ಮತ್ತು ಅವರ ಸೋದರಳಿಯ ನಜೀಮ್ ಅಲಿ ನಿಜಾಮಿ ಮಾರ್ಚ್ 8ರಂದು ಲಾಹೋರ್`ಗೆ ತೆರಳಿದ್ದರು. 80 ವರ್ಷದ ಆಸೀಫ್ ತನ್ನ ಸಹೋದರಿಯನ್ನ ನೋಡಲು ಅಲ್ಲಿಂದ ಕರಾಚಿಗೆ ತೆರಳಿದ್ದರು. ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿ ಭಾರೀ ಸುದ್ದಿಯಾಗಿತ್ತು. ಮೌಲ್ವಿಗಳು ಐಎಸ್ಐ ವಶದಲ್ಲಿದ್ದಾರೆ ಎಂದೂ ಹೇಳಲಾಗಿತ್ತು.

ಈ ಬಗ್ಗೆ ಟ್ವಿಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಈಗತಾನೇ ಸೈಯದ್ ನಜೀಮ್ ಅಲಿ ಜೊತೆ ಮಾತನಾಡಿದ್ದು, ಸೋಮವಾರ ದೆಹಲಿಗೆ ಬರುವುದಾಗಿ ತಿಳಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.ಇಬ್ಬರೂ ಮೌಲ್ವಿಗಳು ದೆಹಲಿಗೆ ಬಂದ ಬಳಿಕ ಸುಷ್ಮಾರನ್ನ ಭೇಟಿಯಾಗುವ ಸಾಧ್ಯತೆ ಇದೆ. ಕೆಲ ತನಿಖಾ ಸಂಸ್ಥೆಗಳು ಸಹ ಅವರನ್ನ ಭೇಟಿಮಾಡುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ