ಸಿದ್ದರಾಮಯ್ಯ ಮಾಸ್ ಲೀಡರ್, ಅವರು ಇಲ್ಲೇ ಇರಬೇಕಾದವರಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

Krishnaveni K

ಸೋಮವಾರ, 7 ಜುಲೈ 2025 (17:16 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಸ್ ಲೀಡರ್ ಇಲ್ಲೇ ಇರಬೇಕಾದವರಲ್ಲ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯನವರನ್ನು ಎಐಸಿಸಿ ಒಬಿಸಿ ಮಂಡಳಿಗೆ ಆಯ್ಕೆ ಮಾಡಿರುವುದು ಈಗ ಭಾರೀ ಚರ್ಚೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸುವ ನಿಟ್ಟಿನಲ್ಲೇ ಕಾಂಗ್ರೆಸ್ ಹೈಕಮಾಂಡ್ ಈ ಪ್ಲ್ಯಾನ್ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ವಿಪಕ್ಷ ಬಿಜೆಪಿ, ಇದು ರಾಜ್ಯದಲ್ಲಿ ಸಿಎಂ ಬದಲಾವಣೆ ಸೂಚನೆ ಎಂದಿದೆ.

ಈ ಬಗ್ಗೆ ಇಂದು ಮಾಧ್ಯಮಗಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ‘ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ಅವರು ಇಲ್ಲಿಗಷ್ಟೇ  ಸೀಮಿತವಾಗಬಾರದು. ಅವರ ಸೇವೆ ರಾಷ್ಟ್ರ ರಾಜಕೀಯಕ್ಕೆ ಸಿಗಬೇಕು. ರಾಷ್ಟ್ರ ರಾಜಕೀಯಕ್ಕೆ ಅವರು ಹೇಳಿ ಮಾಡಿಸಿದ ವ್ಯಕ್ತಿ.

ಕಾಂಗ್ರೆಸ್ ಮೊದಲಿನಿಂದಲೂ ದಮನಿತರು, ಬಡವರು, ಮಹಿಳೆಯರ ಪರವಾಗಿ ಇದೆ. ಸಿದ್ದರಾಮಯ್ಯನವರಿಗೆ ಇವರೆಲ್ಲರ ಪರವಾಗಿ ಕೆಲಸ ಮಾಡುವ ಗುಣವಿದೆ. ಅದೇ ಕಾರಣಕ್ಕೆ ಅವರನ್ನು ನಾನು ಲೀಡರ್ ಎಂದಿದ್ದು. ಹೀಗಾಗಿ ಅವರು ಇಲ್ಲಿಗಷ್ಟೇ ಸೀಮಿತವಾಗಬೇಕಾದವರಲ್ಲ’ ಎಂದು ಸಚಿವೆ ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ