ಭಾರತದ ಅಂತಾರಾಷ್ಟ್ರೀಯ ವಿಮಾನಯಾನ ಮೇಲಿನ ನಿರ್ಬಂಧ ವಿಸ್ತರಿಸಿದ UAE!

ಮಂಗಳವಾರ, 27 ಜುಲೈ 2021 (08:08 IST)
ನವದೆಹಲಿ(ಜು.27):  ಭಾರತದಲ್ಲಿ ಅವಾಂತರ ಸೃಷ್ಟಿಸಿದ ಕೊರೋನಾ 2ನೇ ಅಲೆ ತಗ್ಗಿದೆ. ದೇಶದ ಬಹುತೇಕ ಎಲ್ಲಾ ರಾಜ್ಯಗಳು ಅನ್ಲಾಕ್ ಆಗಿವೆ. ಆದರೆ ಭಾರತದ ವಿಮಾನಗಳಿಗೆ ಯುನೈಟೆಡ್ ಅರಬ್ ಎಮಿರೈಟ್ಸ್(UAE) ಹೇರಿದ ನಿರ್ಬಂಧವನ್ನು ವಿಸ್ತರಿಸಿದೆ. ಆಗಸ್ಟ್ 2ವರೆಗೆ ನಿರ್ಬಂಧ ಮುಂದುವರಿಸಲಾಗುವುದು ಎಂದು  UAE ಅಧಿಕಾರಿಗಳು ಹೇಳಿದ್ದಾರೆ.

•ಭಾರತದಲ್ಲಿ ಕೊರೋನಾ ತಗ್ಗಿದರೂ ನಿರ್ಬಂಧ ಮುಂದುವರಿಸಿದ UAE
•ಭಾರತದ ವಿಮಾನಗಳ ಮೇಲಿನಿ ನಿರ್ಬಂದ ಮುಂದುವರಿಕೆ
•ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಎಂದು UAE

ಭಾರತದಲ್ಲಿ ಕೊರೋನಾ ಕಡಿಮೆಯಾಗಿದೆ ನಿಜ. ಆದರೆ ಡೆಲ್ಟಾ ಪ್ಲಸ್ ವೇರಿಯೆಂಟ್ ಆತಂಕ ಇನ್ನೂ ಇದೆ. ಸುರಕ್ಷತೆ ಹಾಗೂ  ಮುಂಜಾಗ್ರತಾ ಕ್ರಮವಾಗಿ ವಿಮಾನ ಮೇಲಿನ ನಿರ್ಬಂಧ ಅನಿವಾರ್ಯವಾಗಿದೆ ಎಂದು ಎತಿಹಾಡ್ ಏರ್ಲೈನ್ಸ್ ಹೇಳಿದೆ.
ಭಾರತದಲ್ಲಿ ಎರಡನೆ ಕೊರೋನಾ ಅಲೆ ತೀವ್ರಗೊಳ್ಳುತ್ತಿದ್ದಂತೆ UAE ಎಚ್ಚೆತ್ತುಕೊಂಡಿತ್ತು. ಪರಿಣಾಮ ಏಪ್ರಿಲ್ 24 ರಂದು ಭಾರತದಿಂದ ದುಬೈಗೆ ಆಗಮಿಸಿರುವ ಅಂತಾರಾಷ್ಟ್ರೀಯ ವಿಮಾನಕ್ಕೆ ನಿರ್ಬಂಧ ವಿಧಿಸಲಾಯಿತು. ಬಳಿಕ ಹಂತ ಹಂತವಾಗಿ ಮುಂದುವರಿಸುತ್ತಲೇ ಬಂದಿತ್ತು. ಇದೀಗ ಮತ್ತೆ ನಿರ್ಬಂಧ ಮುಂದುವರಿಸಲಾಗಿದೆ.
ಭಾರತದ ವಿಮಾನ ಮಾತ್ರವಲ್ಲ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾದಿಂದ ದುಬೈಗೆ ಆಗಮಿಸುವ ವಿಮಾನದ ನಿರ್ಬಂಧ ಮುಂದುವರಿಸಲಾಗಿದೆ. ಈ ಹಿಂದಿನ ಪ್ರಕಟಣೆಯಲ್ಲಿ ಜುಲೈ 28ರ ವರೆಗೆ ನಿರ್ಬಂಧ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಒಂದು ವಾರ ಮುಂದುವರಿಸಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ