ಉಕ್ರೇನ್ : ರಷ್ಯಾದ ಹೊಸ ರಣತಂತ್ರ!

ಮಂಗಳವಾರ, 29 ಮಾರ್ಚ್ 2022 (11:51 IST)
ಕೀವ್ : ಅನಿರೀಕ್ಷಿತ ಪ್ರಮಾಣದ ಪ್ರತಿರೋಧದಿಂದಾಗಿ ಯುದ್ಧ ಗೆದ್ದು ಬೀಗುವ ರಷ್ಯಾ  ಉತ್ಸಾಹಕ್ಕೆ ತಣ್ಣೀರು ಬಿದ್ದ ಬೆನ್ನಲ್ಲೇ,

ನೆರೆಯ ಉಕ್ರೇನ್ ದೇಶವನ್ನು ವಿಭಜಿಸುವ ಮೂಲಕ ಪರೋಕ್ಷವಾಗಿ ಯುದ್ಧ ಗೆಲ್ಲುವ ತಂತ್ರಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶರಣಾಗಿದ್ದಾರೆ.

ಕಳೆದ ಶುಕ್ರವಾರ ರಷ್ಯಾ ಸೇನೆ, ಉಕ್ರೇನ್ನಲ್ಲಿ ನಮ್ಮ ಮೊದಲ ಹಂತದ ಕಾರ್ಯಾಚರಣೆ ಬಹುತೇಕ ಮುಕ್ತಾಯವಾಗಿದೆ ಎಂದು ಹೇಳಿದ್ದು ಇದೇ ಕಾರಣಕ್ಕಾಗಿ ಎಂದು ಹೇಳಲಾಗಿದೆ.

ಒಂದು ವಾರ ಅಥವಾ 15 ದಿನದಲ್ಲಿ ಉಕ್ರೇನ್ ಅನ್ನು ಸೋಲಿಸಬಹುದು ಎನ್ನುವುದು ರಷ್ಯಾ ಲೆಕ್ಕಾಚಾರವಾಗಿತ್ತು. ಆದರೆ ವಿದೇಶಗಳ ನೆರವಿನಿಂದಾಗಿ ರಷ್ಯಾ ದಾಳಿಯನ್ನು ತಡೆಯುವಲ್ಲಿ ಉಕ್ರೇನ್ ಯಶಸ್ವಿಯಾಗಿದೆ.

ಭಾರೀ ಹಾನಿಯಾದ ಹೊರತಾಗಿಯೂ ದೇಶದ ಯಾವುದೇ ಪ್ರಮುಖ ನಗರವೂ ಕೈತಪ್ಪದಂತೆ ಉಕ್ರೇನ್ ಸೇನೆ ನೋಡಿಕೊಂಡಿದೆ. ಹೀಗಾಗಿ ಉಕ್ರೇನ್ ಸದ್ಯಕ್ಕೆ ಕೈವಶವಾಗುವ ಸಾಧ್ಯತೆ ಇಲ್ಲ.

ಜೊತೆಗೆ ಇಡೀ ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿದರೆ, ತನಗೇ ಮತ್ತಷ್ಟು ನಷ್ಟ ಎಂಬುದನ್ನು ಕಂಡುಕೊಂಡಿರುವ ರಷ್ಯಾ, ಇದೀಗ ಬಂಡುಕೋರರ ವಶದಲ್ಲಿರುವ ಉಕ್ರೇನ್ನ ಪ್ರಾಂತ್ಯವಾದ ಡೋನ್ಬಾಸ್ ಮೇಲೆ ತನ್ನ ಗುರಿಯನ್ನು ಹಾಕಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ