ಉಕ್ರೇನ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಮಂಗಳವಾರ, 22 ಮಾರ್ಚ್ 2022 (14:08 IST)
ಮೂರು ವಾರ ಕಳೆದರೂ ಉಕ್ರೇನನ್ನು ಮಣಿಸಲು ಸಾಧ್ಯವಾಗದೆ ಸಿಟ್ಟಿಗೆದ್ದಿರುವ ರಷ್ಯಾ ಭಾನುವಾರ ಸತತ ಎರಡನೇ ದಿನ ಶಬ್ದಾತೀತ ಕ್ಷಿಪಣಿ ‘ಕಿಂಝಾಲ್‌’ ಬಳಸಿ ಮಾರಕ ದಾಳಿ ನಡೆಸಿದೆ.
 
ಡೆಲಿಟ್ಯನ್‌ ಎಂಬ ಸ್ಥಳದಲ್ಲಿರುವ ಭೂಗತ ಶಶಾತ್ರಸ್ತ್ರ ಸಂಗ್ರಹಾಗಾರದ ಮೇಲೆ ಕಿಂಝಾಲ್‌ ದಾಳಿ ನಡೆಸಿದ್ದ ರಷ್ಯಾ, ಭಾನುವಾರ ಕೋಸ್ತಿಯಾಂತಿನಿವ್ಕಾ ಎಂಬಲ್ಲಿರುವ ತೈಲ ಸಂಗ್ರಹಾಗಾರದ ಮೇಲೆ ಅದೇ ಕ್ಷಿಪಣಿ ಬಳಸಿ ಬಾಂಬ್‌ ದಾಳಿ ನಡೆಸಿ ನಾಶಗೈದಿದೆ. ಇದನ್ನು ಸ್ವತಃ ರಷ್ಯಾದ ಮಿಲಿಟರಿಯೇ ಅಧಿಕೃತವಾಗಿ ತಿಳಿಸಿದೆ.

ಕಿಂಝಾಲ್‌ ಕ್ಷಿಪಣಿಯು ಶಬ್ದಕ್ಕಿಂತ 10 ಪಟ್ಟು ಹೆಚ್ಚು ವೇಗದಲ್ಲಿ ಧಾವಿಸುವ ಶಕ್ತಿ ಹೊಂದಿದ್ದು, 2000 ಕಿ.ಮೀ. ದೂರದಲ್ಲಿರುವ ಗುರಿಯ ಮೇಲೂ ದಾಳಿ ನಡೆಸುತ್ತದೆ. ಭಾನುವಾರ ಎರಡನೇ ಬಾರಿ ಈ ಕ್ಷಿಪಣಿಯನ್ನು ಉಕ್ರೇನ್‌ ಮೇಲೆ ಬಳಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ