ಭೂಗತ ದೊರೆ ದಾವೂದ್ ಸತ್ತಿಲ್ಲ!

ಶನಿವಾರ, 17 ಜೂನ್ 2017 (09:45 IST)
ಇಸ್ಲಾಮಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆರೋಗ್ಯ ಸ್ಥಿತಿ ಗತಿ ಬಗ್ಗೆ ಈ ಹಿಂದೆ ವರದಿಯಾಗಿದ್ದೆಲ್ಲವೂ ಸುಳ್ಳು ಎಂದು ಗುಪ್ತಚರ ಮೂಲಗಳು ಹೇಳಿವೆ.

 
ದಾವೂದ್ ಸಾಯುವ ಸ್ಥಿತಿಯಲ್ಲಿದ್ದಾನೆ. ಆತನ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಂಗಾಂಗ ವೈಪಲ್ಯಕ್ಕೊಳಗಾಗಿದ್ದಾನೆ ಎಂಬುದೆಲ್ಲಾ ಸುಳ್ಳು ಎಂದು ತಿಳಿದುಬಂದಿದೆ. ಆತ ಇನ್ನೂ ಬದುಕಿದ್ದಾನೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಪಾಕಿಸ್ತಾನದ ಗೂಢಚರ ಇಲಾಖೆ ಐಎಸ್ಐಯ ಭದ್ರತೆಯಲ್ಲಿ ಆತ ಸುರಕ್ಷಿತವಾಗಿದ್ದಾನೆ ಎನ್ನಲಾಗಿದೆ. 1993 ರ ಮುಂಬೈ ಸ್ಪೋಟದ ಮಾಸ್ಟರ್ ಮೈಂಡ್ ದಾವೂದ್ ಗೆ ಇತ್ತೀಚೆಗೆ ಸಣ್ಣ ಶಸ್ತ್ರಚಿಕಿತ್ಸೆಯಾಗಿತ್ತು. ಅದು ಬಿಟ್ಟರೆ ಆತ ಆರೋಗ್ಯವಾಗಿಯೇ ಇದ್ದಾನೆ.

ಆತನಿಗೆ ನೀಡುತ್ತಿರುವ ಭದ್ರತೆಯನ್ನು ಪಾಕ್ ಇನ್ನಷ್ಟು ಹೆಚ್ಚಿಸಿದೆ. ಅಲ್ಲದೆ, ಆತನ ಆಪ್ತನೊಬ್ಬ ಸದಾ ಆತನ ಸೇವೆಗೆ ಸಿದ್ಧನಿರುತ್ತಾನೆ ಎಂದು ಗುಪ್ತಚರ ಮೂಲಗಳ ವರದಿಗಳು ಹೇಳಿವೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ