ಭಾರೀ ಶಸ್ತ್ರಾಸ್ತ್ರ ನೆರವು ಘೋಷಿಸಿದ ಯುಎಸ್ ಅಧ್ಯಕ್ಷ

ಮಂಗಳವಾರ, 21 ಫೆಬ್ರವರಿ 2023 (08:12 IST)
ಕೀವ್ : ಉಕ್ರೇನ್ ಮೇಲೆ ರಷ್ಯಾ ಯುದ್ಧ ಶುರು ಮಾಡಿ ಇದೇ ಫೆಬ್ರವರಿ 24ಕ್ಕೆ ಒಂದು ವರ್ಷ ತುಂಬಲಿದೆ. ಈ ಹೊತ್ತಿನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ.

ಕೀವ್ನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನಿಗರ ಜೊತೆ ನಾವಿದ್ದೇವೆ ಎಂಬ ಸಂದೇಶ ನೀಡಿದ್ದಲ್ಲದೇ ಶಸ್ತ್ರಾಸ್ತ್ರ ವಿತರಣೆ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಉಕ್ರೇನ್ ರಕ್ಷಿಸಲು ಎಲ್ಲ ರೀತಿಯ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. 

`ಉಕ್ರೇನಿಯನ್ ಜನರನ್ನು ವೈಮಾನಿಕ ಬಾಂಬ್ ದಾಳಿಯಿಂದ ರಕ್ಷಿಸಲು ಫಿರಂಗಿ, ಮದ್ದು-ಗುಂಡುಗಳು, ರಕ್ಷಣಾ ವ್ಯವಸ್ಥೆಗಳು ಹಾಗೂ ವಾಯು ಕಣ್ಗಾವಲು ರಾಡರ್ಗಳು ಸೇರಿದಂತೆ ನಿರ್ಣಾಯಕ ಸಲಕರಣೆಗಳನ್ನು ಪೂರೈಸುತ್ತೇನೆ ಎಂಬುದಾಗಿ ಶ್ವೇತಭವನದ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಬ್ರಿಟನ್ ಸಹ ಉಕ್ರೇನ್ಗೆ ಸೇನಾ ನೆರವು ಘೋಷಣೆ ಮಾಡಿತು. ರಷ್ಯಾವನ್ನು ಹಿಮ್ಮೆಟ್ಟಿಸಲು ಮೇ ತಿಂಗಳ ವೇಳೆಗೆ ಯುದ್ಧ ವಿಮಾನಗಳು ಹಾಗೂ ಯುದ್ಧ ಟ್ಯಾಂಕರ್ಗಳನ್ನು ಕೀವ್ಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ