ತನ್ನ ತಲೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡ ಮೇಲೂ ಬುದ್ಧಿ ಕಲಿಯದ ಪಾಕ್

ಸೋಮವಾರ, 3 ಸೆಪ್ಟಂಬರ್ 2018 (11:31 IST)
ಇಸ್ಲಾಮಾಬಾದ್: ಉಗ್ರರ ನಿಯಂತ್ರಣ ಮಾಡಿ ಎಂದು ಯಾರೇ ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳದ ಪಾಕಿಸ್ತಾನಕ್ಕೆ ಅಮೆರಿಕಾ ತಕ್ಕ ಪಾಠವನ್ನೇ ಕಲಿಸಿದೆ.

ತಾನು ಪಾಕ್ ಗೆ ನೀಡಬೇಕಿದ್ದ 2,130 ಕೋಟಿ ನೆರವನ್ನು ರದ್ದುಗೊಳಿಸುವ ಮೂಲಕ ಉಗ್ರರ ನಿಯಂತ್ರಣ ಮಾಡದ್ದಕ್ಕೆ ತಕ್ಕ ಶಿಕ್ಷೆಯನ್ನೇ ನೀಡಿದೆ.

ಕವಚಿ ಬಿದ್ದರೂ ಮೂಗು ಮೇಲೆಯೇ ಎನ್ನುವ ಪಾಕ್ ಇಷ್ಟೆಲ್ಲಾ ಆದರೂ ಇದು ಅಮೆರಿಕಾ ನೆರವಿನ ಹಣವಾಗಿರಲಿಲ್ಲ. ಉಗ್ರರ ವಿರುದ್ಧ ಹೋರಾಟಕ್ಕೆ ನೀಡುತ್ತಿದ್ದ ಹಣಕಾಸಿನ ನೆರವಾಗಿತ್ತು ಎಂದು ತೇಪೆ ಹಾಕುವ ಕೆಲಸ ಮಾಡಿದೆ. ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾದ ದಿನದಿಂದಲೇ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಿರ್ಧಾರ ಭಾರತಕ್ಕೆ ಶುಭ ಸಂದೇಶವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ