ಆರ್‌ಎಸ್‌ಎಸ್‌ ನಿಷೇಧದ ಹಿಂದಿನ ಉದ್ದೇಶದ ಬಗ್ಗೆ ನ್ಯಾ ಸಂತೋಷ ಹೆಗಡೆ ಸ್ಫೋಟಕ ಹೇಳಿಕೆ

Sampriya

ಶುಕ್ರವಾರ, 17 ಅಕ್ಟೋಬರ್ 2025 (18:02 IST)
Photo Credit X
ಧಾರವಾಡ: ಸಂವಿಧಾನದಲ್ಲಿ ಆರ್‌ಎಸ್ಎಸ್ ಸೇರಿದಂತೆ ಎಲ್ಲರಿಗೂ ಸಂಘಟನೆ ಕಟ್ಟುವ ಹಕ್ಕಿದ್ದು, ಸಂಘಟನೆಯನ್ನು ನಿಷೇಧ ಮಾಡುವ ಕ್ರಮ ಸಂವಿಧಾನ ವಿರೋಧಿ ಎಂದು ಮಾಜಿ ಲೋಕಾಯುಕ್ತ, ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಹೇಳಿದರು. 

ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಘಟನೆ ಮಾಡುವ ಅಧಿಕಾರ, ಹಕ್ಕು ಸಂವಿಧಾನ ಕೊಟ್ಟಿದೆ. ಹೀಗಿರುವಾಗ ಆರ್‌ಎಸ್ಎಸ್ ಸಂಘಟನೆ ನಿಷೇಧಿಸಲು ಹೊರಟಿರುವುದು ಸಂವಿಧಾನಕ್ಕೆ ವಿರೋಧಿ ಎಂದರು.

ಇದೀಗ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಆರ್‌ಎಸ್‌ಎಸ್‌ಅನ್ನು ನಿಷೇಧಿಸಲು ಹೊರಟಿದ್ದು, ಮುಂದೇ ಬಿಜೆಪಿ ಮತ್ತೇ ಅಧಿಕಾರಕ್ಕೆ ಬಂದ್ಮೇಲೆ  ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸುತ್ತಾರೆ. ಆಗ ಅವರ ಆಟ ಶುರುವಾಗುತ್ತದೆ. ಒಟ್ಟಿನಲ್ಲಿ ನಿಷೇಧಿಸುವ ಆಟ ಜೋರಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ