ಅಮೆರಿಕಾ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಎಚ್ ಬುಷ್ ನಿಧನ
ಪಾರ್ಕಿನ್ ಸನ್ ಖಾಯಿಲೆಯಿಂದ ಬಳಲುತ್ತಿದ್ದ ಬುಷ್ ಅಮೆರಿಕಾದ 41 ನೇ ಅಧ್ಯಕ್ಷರಾಗಿದ್ದರು. ವಿಶೇಷವೆಂದರೆ ಅವರ ಪತ್ನಿ ಎಂಟು ತಿಂಗಳ ಹಿಂದಷ್ಟೇ ತೀರಿಕೊಂಡಿದ್ದರು. ರಿಪಬ್ಲಿಕನ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ಬುಷ್ 1989 ರಿಂದ 1993 ರವರೆಗೆ ಅಮೆರಿಕಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಅವರ ಪುತ್ರ ಜಾರ್ಜ್ ಡಬ್ಲ್ಯು ಬುಷ್ ಕೂಡಾ ಅಮೆರಿಕಾದ ಅಧ್ಯಕ್ಷರಾಗಿದ್ದವರೇ. 1995 ರಿಂದ 2000 ದವರೆಗೆ ಪುತ್ರ ಬುಷ್ ಅಮೆರಿಕಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.