ಕೆಲಸ ಮಾಡದ ನೌಕರರಿಗೆ ಮೂತ್ರ ಕುಡಿಯುವ, ಜಿರಳೆ ತಿನ್ನುವ ಶಿಕ್ಷೆ!
ಹೇಳಿದ ದಿನದೊಳಗೆ ಕೆಲಸ ಪೂರ್ತಿ ಮಾಡದ ನೌಕರರಿಗೆ ಕಂಪನಿಯೊಂದು ಮೂತ್ರ ಕುಡಿಯುವ, ಜಿರಳೆ ತಿನ್ನುವ, ತಲೆ ಕೂದಲು ಬೋಳಿಸಿಕೊಳ್ಳುವ ಅಮಾನವೀಯ ಶಿಕ್ಷೆ ವಿಧಿಸಿದೆ. ಇದರ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವು ನೌಕರರು ತಾವಾಗಿಯೇ ಕೆಲಸಕ್ಕೆ ಗುಡ್ ಬೈ ಹೇಳುತ್ತಿದ್ದಾರಂತೆ.
ಇದು ಚೀನಾದಲ್ಲಿ ನೌಕರರ ಪರಿಸ್ಥಿತಿಗೆ ಹಿಡಿದ ಕೈ ಗನ್ನಡಿಯಂತಿದೆ. ಇಲ್ಲಿ ಕಾರ್ಮಿಕರನ್ನು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬ ಮಾತಿಗೆ ಈ ದೃಶ್ಯಗಳೇ ಸಾಕ್ಷಿಯಾಗಿದೆ.