ಸಾಲ ಮಾಡಿ ಲಂಡನ್ ಗೆ ಓಡಿ ಹೋಗಿದ್ದ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥನಿಗೆ ಮದ್ವೆಯಂತೆ
ಸದ್ಯಕ್ಕೆ ವಿಜಯ್ ಮಲ್ಯ ಫ್ಯಾಮಿಲಿ ಸಮೇತ ಲಂಡನ್ ನಲ್ಲಿ ನೆಲೆಸಿದ್ದಾರೆ. ಸಿದ್ಧಾರ್ಥ ನಟನಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು. ಈ ಹಿಂದೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡಿ ಸುದ್ದಿಯಾಗಿದ್ದರು. ಇದೀಗ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಜೊತೆ ಮದುವೆಯಾಗಲಿದ್ದಾರೆ.
ಈ ಬಗ್ಗೆ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿದೆ ಎನ್ನಲಾಗಿದೆ. ಇದೇ ವಾರ ಮದುವೆ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿಯಿದೆ. ಅವರು ಈ ಮಾಹಿತಿ ಹಂಚಿಕೊಳ್ಳುತ್ತಿದ್ದಂತೇ ಅನೇಕರು ಶುಭಾಶಯ ಹೇಳಿದ್ದಾರೆ.
ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ಹುಟ್ಟಿದ್ದು ಕ್ಯಾಲಿಫೋರ್ನಿಯಾದಲ್ಲಿ . ಲಂಡನ್ ಮತ್ತು ಯುಎಇನಲ್ಲಿ ಶಿಕ್ಷಣ ಪಡೆದಿದ್ದಾರೆ. ವೆಲ್ಲಿಂಗ್ಟನ್ ಕಾಲೇಜು ಮತ್ತು ಕ್ವೀನ್ ಮ್ಯಾರಿ ವಿವಿಯಲ್ಲಿ ಪದವಿ ಪಡೆದಿದ್ದಾರೆ. ಪ್ರಾಯೋಗಿಕವಾಗಿ ನಟನಾ ತರಬೇತಿ ಪಡೆದಿದ್ದಾರೆ.