ವಿಜಯ ಮಲ್ಯ : CBI ನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

ಶನಿವಾರ, 25 ಮಾರ್ಚ್ 2023 (13:16 IST)
ಯುಕೆನಲ್ಲಿ ಸುಮಾರು 44 ಮದ್ಯ ಘಟಕಗಳನ್ನ ಅವರು ಸ್ಥಾಪಿಸಿದ್ದರು. ಆ ಮೂಲಕ ಅವರು ಯುರೋಪಿನಾದ್ಯಂತ ಹಲವಾರು ಕಡೆ ಹೂಡಿಕೆ ಮತ್ತು ಆಸ್ತಿ ಖರೀದಿಸಿದ್ದಾರೆ ಎಂದು ಹೇಳಿದೆ.

900 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದ ಐಡಿಬಿಐ ಬ್ಯಾಂಕ್ -ಕಿಂಗ್ಫಿಷರ್ ಏರ್ಲೈನ್ಸ್ ಸಾಲ ವಂಚನೆ ಪ್ರಕರಣದಲ್ಲಿ ವಿಜಯ ಮಲ್ಯ ಆರೋಪಿಯಾಗಿದ್ದು, ಈ ಸಂಬಂಧ ಸಿಬಿಐ ಇತ್ತೀಚೆಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಪೂರಕ ಚಾರ್ಜ್ಶೀಟ್ ಸಲ್ಲಿಸಿದೆ. 

ಸಿಬಿಐ ಹಿಂದಿನ ಚಾರ್ಜ್ಶೀಟ್ಗಳಲ್ಲಿ ಹೆಸರಿಸಲಾದ ಎಲ್ಲಾ 11 ಆರೋಪಿಗಳ ಜೊತೆಗೆ, ತನಿಖಾ ಸಂಸ್ಥೆ ತನ್ನ ಇತ್ತೀಚಿನ ಪೂರಕ ಆರೋಪ ಪಟ್ಟಿಯಲ್ಲಿ ಐಡಿಬಿಐ ಬ್ಯಾಂಕ್ನ ಮಾಜಿ ಜನರಲ್ ಮ್ಯಾನೇಜರ್ ಬುದ್ಧದೇವ್ ದಾಸ್ಗುಪ್ತಾ ಅವರ ಹೆಸರನ್ನು ಸೇರಿಸಿದೆ.  

2009ರ ಅಕ್ಟೋಬರ್ನಲ್ಲಿ 150 ಕೋಟಿ ರೂ. ಅಲ್ಪಾವಧಿ ಸಾಲ ಮಂಜೂರಾತಿ ಮತ್ತು ವಿತರಣೆಗಾಗಿ ದಾಸ್ಗುಪ್ತಾ ಅವರು ತಮ್ಮ ಹುದ್ದೆ ದುರುಪಯೋಗಪಡಿಸಿಕೊಂಡಿದ್ದಾರೆ. ವಿಜಯ ಮಲ್ಯ ಜೊತೆ ಸೇರಿ ಪಿತೂರಿ ನಡೆಸಿದ್ದಾರೆ. ಏರ್ಲೈನ್ಸ್ಗೆ ಸಾಲ ನೀಡುವ ವಿಚಾರದಲ್ಲಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ