ಹೌದು, ಸಾಮಾನ್ಯವಾಗಿ ಪಾಸ್ಪೋರ್ಟ್ ಕಳೆದುಕೊಂಡರೆ ಪೊಲೀಸ್ ಠಾಣೆಗೆ ಅಥವಾ ರಾಯಭಾರಿ ಕಚೇರಿಗೆ ಹೋಗುತ್ತಾರೆ. ಆದರೆ ಮ್ಯಾಕ್ ಡೊನಾಲ್ಡ್ಸ್ ಸಂಸ್ಥೆ ಹಾಗೂ ಅಮೆರಿಕಾ ರಾಯಭಾರ ಕಚೇರಿ ಮಾಡಿಕೊಂಡಿರುವ ನೂತನ ಒಪ್ಪಂದದ ಪ್ರಕಾರ, ಅಮೆರಿಕಾ ಪ್ರಜೆಗಳು ಪಾಸ್ಪೋರ್ಟ್ ಕಳೆದು ಹೋದರೆ ಅಥವಾ ಪ್ರಯಾಣಿಕರಿಗೆ ಅಗತ್ಯವಿರುವ ಸಹಕಾರವನ್ನು ಮ್ಯಾಕ್ ಡಿ ಮಾಡಲಿದ್ದು, ಆ ಮೂಲಕ ತನ್ನ ದೇಶದ ರಾಯಭಾರಿ ಕಛೇರಿ ಜತೆ ಸಂಪರ್ಕಿಸಲು ಸಹಾಯ ಮಾಡಲಿವೆ.
ಈ ವಿಚಾರ ಮ್ಯಾಕ್ ಡೊನಾಲ್ಡ್ಸ್ ಸಂಸ್ಥೆ ತಳಿಸಿದೆ. ಆದರೆ ಈ ವಿಚಾರದ ಬಗ್ಗೆ ಅಮೆರಿಕಾ ರಾಯಭಾರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮ್ಯಾಕ್ ಡೊನಾಲ್ಡ್ಸ್ ಸಂಸ್ಥೆ ಹಾಗೂ ಅಮೆರಿಕಾ ರಾಯಭಾರ ಕಚೇರಿ ಜಾರಿಗೆ ತಂದ ಈ ನೂತನ ಯೋಜನೆಯನ್ನು ಮೆಚ್ಚಿದ ಜನರು ಈ ವ್ಯವಸ್ಥೆಯನ್ನು ಮ್ಯಾಕ್ ವೀಸಾ ಅಥವಾ ಮ್ಯಾಕ್ ಪಾಸ್ಪೋರ್ಟ್ ಎಂದು ಬಣ್ಣಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.