ಹವಾಯಿ ದ್ವೀಪದ ಆಗ್ನೇಯ ಭಾಗದಲ್ಲಿ ಕಾಣಿಸಿಕೊಂಡ ಜ್ವಾಲಾಮುಖಿ
ಸೋಮವಾರ, 7 ಮೇ 2018 (13:51 IST)
ಹವಾಯಿ : ಹವಾಯಿ ದ್ವೀಪದ ಆಗ್ನೇಯ ಭಾಗದ ವಿವಿಧ ಪ್ರದೇಶಗಳಲ್ಲಿ ಗುರುವಾರ ಪ್ರಬಲ ಜ್ವಾಲಾಮುಖಿ ಉಂಟಾಗಿರುವ ಹಿನ್ನಲೆಯಲ್ಲಿ ಲಾವಾರಸ ಯಾವಾಗ ಬೇಕಾದರೂ ಹೊರಬರುವ ಸಾಧ್ಯತೆ ಇರುವುದರಿಂದ ದ್ವೀಪದ ವಿವಿಧ ಪ್ರದೇಶಗಳ ನಿವಾಸಿಗಳು ಕಟ್ಟೆಚ್ಚರ ವಹಿಸುವಂತೆ ಹವಾಯಿ ಜ್ವಾಲಾಮುಖಿ ವೀಕ್ಷಣಾಲಯದ ಸೂಚನೆ ನೀಡಿದೆ.
ಪಹೋವಾ ಪಟ್ಟಣದಲ್ಲಿ 6.9ರಷ್ಟು ತೀವ್ರತೆಯ ಭೂಕಂಪದ ಜತೆ, ಜ್ವಾಲಾಮುಖಿಯಿಂದ 19 ಕಿ.ಮೀ ದೂರದ ಲೇಲಾನಿ ಎಸ್ಟೇಟ್ಸ್ ಉಪಪ್ರಾಂತ್ಯದವರೆಗೆ ಲಾವಾರಸ ಹರಿದುಬಂದಿದ್ದರಿಂದ ಆ ಪ್ರದೇಶಗಳ ನಿವಾಸಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಜ್ವಾಲಾಮುಖಿ ಮತ್ತು ಭೂಕಂಪದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಗೇ 'ಜ್ವಾಲಾಮುಖಿಯ ತೀವ್ರತೆ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ. ಮತ್ತೆ ಭೂಕಂಪ ಮತ್ತು ಲಾವಾರಸ ಬಿಡುಗಡೆ ಆಗಬಹುದು. ಈ ಪರಿಸ್ಥಿತಿಯು ಎಲ್ಲರಿಗೂ ಕಠಿಣ ಸವಾಲಾಗಿ ಪರಿಣಮಿಸಿದೆ' ಎಂದು ವೀಕ್ಷಣಾಲಯದ ವಿಜ್ಞಾನಿ ಟೀನಾ ನೀಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ