ವಯನಾಡು ಪ್ರವಾಸೋದ್ಯಮಕ್ಕೆ ಕರ್ನಾಟಕದಿಂದ ಜಾಹೀರಾತು: ಪ್ರಿಯಾಂಕಗಾಗಿ ಎಂದು ಟೀಕಿಸಿದ ಸಿಟಿ ರವಿ

Krishnaveni K

ಬುಧವಾರ, 29 ಅಕ್ಟೋಬರ್ 2025 (15:07 IST)
Photo Credit: X
ಬೆಂಗಳೂರು: ಕೇರಳದ ವಯನಾಡು ಪ್ರವಾಸೋದ್ಯಮಕ್ಕೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಜಾಹೀರಾತು ನೀಡಿದೆ. ಇದನ್ನು ಪ್ರಶ್ನಿಸಿರುವ ಬಿಜೆಪಿ ನಾಯಕ ಸಿಟಿ ರವಿ ಇದೆಲ್ಲಾ ಅಲ್ಲಿನ ಸಂಸದೆಯೂ ಆಗಿರುವ ಪ್ರಿಯಾಂಕ ಗಾಂಧಿಯನ್ನು ಮೆಚ್ಚಿಸಲು ಮಾಡ್ತಿರುವ ಕೆಲಸ ಎಂದು ಟೀಕಿಸಿದ್ದಾರೆ.

ಕರ್ನಾಟಕದ ಪ್ರವಾಸೋದ್ಯಮ ಇಲಾಖೆ ಸೋಷಿಯಲ್ ಮೀಡಿಯಾದಲ್ಲಿ ಜಾಹೀರಾತೊಂದನ್ನು ನೀಡಿದೆ. ಈ ಜಾಹೀರಾತಿನಲ್ಲಿ ವಯನಾಡಿನ ಸುಂದರ ತಾಣಗಳನ್ನು ಆಸ್ವಾದಿಸಲು ಬನ್ನಿ. ಎರಡು ರಾತ್ರಿ, ಮೂರು ದಿನಗಳ ಪ್ರವಾಸದ ಆಫರ್ ಎಂದು ಜಾಹೀರಾತು ನೀಡಿದೆ.

ಇದಕ್ಕೆ  ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾದ ಕೆಎಸ್‌ಟಿಡಿಸಿ ವಯನಾಡಿಗೆ ಕನ್ನಡಿಗರನ್ನು ಕರೆಯುತ್ತಿದೆ!!!
ವಯನಾಡು ಕರ್ನಾಟಕಕ್ಕೆ ಸೇರಿತೇ? ಅಥವಾ ಕೆಎಸ್‌ಟಿಡಿಸಿ ಕೇರಳದ್ದಾಯಿತೇ?

ತಮ್ಮ ಪಕ್ಷದ ಅಧಿನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಮೆಚ್ಚಿಸಲು ಕನ್ನಡ ನಾಡಿನ ಗೌರವವನ್ನು ಅಡವಿಡಲು ಹೊರಟಿದೆ ಕಾಂಗ್ರೆಸ್ ಸರ್ಕಾರ’ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ