ಭಾರತ-ಚೀನಾ ನಡುವೆ ಯುದ್ಧ ಭೀತಿ? ಸನ್ನದ್ಧವಾಗಿದೆಯಾ ಭಾರತೀಯ ಸೇನೆ?

ಗುರುವಾರ, 10 ಆಗಸ್ಟ್ 2017 (12:08 IST)
ನವದೆಹಲಿ: ಡೋಕ್ಲಾಂ ಗಡಿ ವಿವಾದದ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವೆ ಯುದ್ಧ ಭೀತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಭಾರತೀಯ ಸೇನೆ ಗಡಿ ಗ್ರಾಮಗಳಿಂದ ಸಾರ್ವಜನಿಕರನ್ನು ತೆರವುಗೊಳಿಸುತ್ತಿದೆ. ಇದು ಉಭಯ ದೇಶಗಳ ನಡುವೆ ಯುದ್ಧ ಭೀತಿ ಹೆಚ್ಚಿರುವ ಸೂಚನೆಯೇ ಎಂದು ಅನುಮಾನಗಳು ಮೂಡಿವೆ.


ಚೀನಾ ಈಗಾಗಲೇ ಯುದ್ಧೋತ್ಸಾಹದಲ್ಲಿದೆ. ಭಾರತ ಕೂಡಾ ತನ್ನ ಪಟ್ಟು ಸಡಿಲಿಸದ ಹಿನ್ನಲೆಯಲ್ಲಿ ಡೋಕ್ಲಾಂ ಗಡಿ ಭಾಗದ ಸಮೀಪವಿರುವ ನಥಾಂಗ್ ಗ್ರಾಮದಿಂದ ಜನರನ್ನು ಸ್ಥಳಾಂತರಗೊಳ್ಳಲು ಸೂಚನೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಭಾಗದಲ್ಲಿ ಭಾರತೀಯ ಯೋಧರ ಓಡಾಟ ಹೆಚ್ಚಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಯುದ್ಧ ಭೀತಿ ಎದುರಾಗಿದೆಯಾ ಎಂಬ ಅನುಮಾನಗಳು ಕಾಡಿವೆ. ಆದರೆ ಇದು ಸಾಮಾನ್ಯ ಪ್ರಕ್ರಿಯೆ ಎಂದು ಭಾರತೀಯ ಸೇನೆ ಹೇಳಿಕೊಂಡಿದೆ.

ಇದನ್ನೂ ಓದಿ… ವಿದೇಶೀ ಫುಟ್ಬಾಲಿಗನ ಬೆನ್ನಲ್ಲಿ ಓಂ ನಮಃ ಶಿವಾಯ ಟ್ಯಾಟೂ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ