ಭಾರತ- ಪಾಕಿಸ್ತಾನಕ್ಕೆ ಯುದ್ಧ ಉತ್ತಮ ಆಯ್ಕೆಯಲ್ಲ: ಪಾಕ್ ರಾಯಭಾರಿ
ಭಾನುವಾರ, 9 ಅಕ್ಟೋಬರ್ 2016 (12:14 IST)
ಭಾರತ ಮತ್ತು ಪಾಕಿಸ್ತಾನಕ್ಕೆ ಯುದ್ಧ ಅನಿವಾರ್ಯವಲ್ಲ. ಕಾಶ್ಮಿರ ಸೇರಿದಂತೆ ಇತರ ವಿವಾದಗಳನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕು ಎನ್ನುವುದು ಪಾಕಿಸ್ತಾನದ ಬಯಕೆಯಾಗಿದೆ ಎಂದು ಪಾಕಿಸ್ತಾನದ ರಾಯಭಾರಿ ಹೇಳಿದ್ದಾರೆ.
ಉಭಯ ದೇಶಗಳು ಪರಮಾಣು ಅಸ್ತ್ರಗಳನ್ನು ಹೊಂದಿರುವುದರಿಂದ ಯುದ್ಧ ಉತ್ತಮ ಆಯ್ಕೆಯಲ್ಲ. ಉಭಯ ದೇಶಗಳು ಆರ್ಥಿಕ ಅಭಿವೃದ್ಧಿ, ಜನತೆಯ ಯೋಗ ಕ್ಷೇಮವನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದು ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿ ಜಲೀಲ್ ಅಬ್ಬಾಸ್ ಜಿಲಾನಿ ಸಲಹೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯಕ್ಕೆ ತಕ್ಕಂತೆ ಕಾಶ್ಮಿರ ಸೇರಿದಂತೆ ಇತರ ವಿವಾದಗಳನ್ನು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ