ಜೇಡ ಇಲಿಯನ್ನು ಹೊತ್ತೊಯ್ಯುತ್ತಿದೆ ನೋಡಿ? (ವಿಡಿಯೋ)

ಗುರುವಾರ, 27 ಅಕ್ಟೋಬರ್ 2016 (11:41 IST)
ಜೇಡರ ಹುಳುಗಳು ಬಲೆ ಹೆಣೆದು ಅದರಲ್ಲಿ ಸಿಲುಕುವ ಸಣ್ಣಪುಟ್ಟ ಕೀಟಗಳನ್ನು ತಿನ್ನೋದನ್ನಾ ನೋಡಿರುತ್ತಿರ. ಸಣ್ಣ ಸಣ್ಣ ಇರುವೆಗಳೆಲ್ಲ ಜತೆಯಾಗಿ ತಮಗಿಂತ 10 ಪಟ್ಟು ದೊಡ್ಡದಾದ ವಸ್ತುವನ್ನು, ಸತ್ತ ಹುಳವನ್ನು ಎತ್ತಿಕೊಂಡು ಹೋಗೋದನ್ನು ನೋಡಿರಬಹುದು. ಆದರೆ ಜೇಡರ ಹುಳವೊಂದು ಇಲಿಯೊಂದನ್ನು ಎಳೆದೊಯ್ಯುವುದನ್ನು ನೋಡಿದ್ದೀರಾ? 
ಇಂತಹದೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಆಸೀಸ್ ನಿವಾಸಿ ಜೇಸನ್ ವೋಮ್ಸ್ ತಮ್ಮ ಅಡುಗೆ ಕೋಣೆಯಲ್ಲಿ ಕಂಡು ಬಂದ ಈ ಅಪರೂಪದ ದೃಶ್ಯವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 
 
ಈ ವಿಡಿಯೋವನ್ನು 1.6 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು , 2 ಲಕ್ಷಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ. 
 
 ಜೇಡ ಇಲಿಯನ್ನು ಹೊತ್ತೊಯ್ಯುತ್ತಿದೆ ನೋಡಿ? (ವಿಡಿಯೋ)
 

ವೆಬ್ದುನಿಯಾವನ್ನು ಓದಿ