ನಮ್ಮಲ್ಲಿರುವುದು ಬರೀ 6 ಲಕ್ಷ ಸೈನಿಕರು, ನಾವು ಉಳಿಯುವುದಿಲ್ಲ ಎಂದ ಪಾಕ್‌ನ ಮಾಜಿ ಸೇನಾಧಿಕಾರಿ

Sampriya

ಶನಿವಾರ, 10 ಮೇ 2025 (13:00 IST)
Photo Courtesy X
ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ಮಧ್ಯೆ ಸೇನಾ ಸಂಘರ್ಷ ತಾರಕ್ಕಕೇರಿದೆ. ಈ ಮಧ್ಯೆ ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಖ್ತರ್ ಅವರು ಭಾರತದೊಂದಿಗಿನ ಯುದ್ಧದಲ್ಲಿ ನಾವು ಉಳಿಯುವುದಿಲ್ಲ ಎಂಬ ಹೇಳಿಕೆ ಮಹತ್ವ ಪಡೆದಿದೆ.

ಭಾರತದಲ್ಲಿ 16 ಲಕ್ಷ ಸೈನಿಕರಿದ್ದಾರೆ. ಆದರೆ ನಮ್ಮಲ್ಲಿ ಬರೀ 6 ಲಕ್ಷವಷ್ಟೇ ಸೈನಿಕರಿದ್ದಾರೆ. ಹಾಗಾಗಿ ಭಾರತದೊಂದಿಗಿನ ಯಾವುದೇ ಯುದ್ಧವು ನಮ್ಮನ್ನು ಉಳಿಸುವುದಿಲ್ಲ ಎಂದು ಭೀತಿಯನ್ನು ಅವರು ಮಾಧ್ಯಮವೊಂದರಲ್ಲಿ ವ್ಯಕ್ತಪಡಿಸಿದ್ದಾರೆ.  

ಈಗ ಪಾಕಿಸ್ತಾನದ ಪರಿಸ್ಥಿತಿಯನ್ನು ನೋಡಿದರೆ ಚಿಂತಾಜನಕವಾಗಿವೆ. ಅದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ನಮ್ಮಲ್ಲಿ ದಿನೇದಿನೇ ಪರಿಸ್ಥಿತಿ ಹದಗೆಡುತ್ತಿದೆ. ಅಮೆರಿಕ ಒತ್ತಡ ಹೇರುವವರೆಗೆ ಉದ್ವಿಗ್ನತೆ ಕಡಿಮೆಯಾಗುವುದಿಲ್ಲ ಎಂದಿದ್ದಾರೆ.

ನಾವು ನಿಜವಾಗಿಯೂ ಏನು ಮಾಡಬೇಕೆಂದು ಯೋಚಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಹೇಳಿದ್ದಾರೆ. ಮಸೂದ್ ಅಖ್ತರ್ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಏ.33ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಮಾಡಿ 26 ಮಂದಿ ಅಮಾಯಕರ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ ಎಂಬ ಹೆಸರಿನಡಿ ಪಾಕ್‌ನ 9 ಸ್ಥಳಗಳಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿತ್ತು. ನಂತರದಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ತಾರಕ್ಕಕ್ಕೇರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ