Operation Sindoor: ಪಾಕಿಸ್ತಾನದ ಮಿಲಿಟರಿ ಪೋಸ್ಟ್‌, ಡ್ರೋನ್ ಲಾಂಚ್‌ಪ್ಯಾಡ್‌ ಉಡೀಸ್‌

Sampriya

ಶನಿವಾರ, 10 ಮೇ 2025 (11:29 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ತಾರಕಕ್ಕೆ ಏರಿದೆ. ಇದರ ಬೆನ್ನಲ್ಲೇ ಪಾಕ್‌ ಸೇನೆಯು ಶುಕ್ರವಾರ ನಡೆಸಿದ ಡ್ರೋನ್‌ ಹಾಗೂ ಕ್ಷಿಪಣಿ ದಾಳಿಗಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.

ಡ್ರೋನ್‌ ದಾಳಿಗಳನ್ನು ನಡೆಸಲು ಪಾಕಿಸ್ತಾನ ಬಳಸುತ್ತಿದ್ದ ಮಿಲಿಟರಿ ಪೋಸ್ಟ್‌ಗಳು ಮತ್ತು ಲಾಂಚ್‌ಪ್ಯಾಡ್‌ಗಳನ್ನು ಭಾರತೀಯ ಸೇನಾಪಡೆಗಳು ಧ್ವಂಸಗೊಳಿಸಿ, ಪಾಕಿಸ್ತಾನಕ್ಕೆ ದೊಡ್ಡ ಆಘಾತ ನೀಡಿದೆ. ‌ಆಪರೇಷನ್‌ ಸಿಂಧೂರ ಕಾರ್ಯಾಚರಣೆಗೆ ಪಾಕ್‌ ಪತರಗುಟ್ಟಿದೆ.

ಪಾಕಿಸ್ತಾನವು ಟ್ಯೂಬ್ ಲಾಂಚ್‌ಪ್ಯಾಡ್‌ ಅನ್ನು ಡ್ರೋನ್‌ಗಳನ್ನು ಉಡಾಯಿಸಲು ಬಳಸುತ್ತಿತ್ತು. ಜಮ್ಮು ಬಳಿ ನೆಲೆಗೊಂಡಿರುವ ಭಾರತೀಯ ಸೇನಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು ನೀಡಿದೆ.

‌ಪಾಕಿಸ್ತಾನ ಸೇನೆಯು ಶುಕ್ರವಾರ ರಾತ್ರಿಯೂ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆ, ಪಂಜಾಬ್‌ನ ಫಿರೋಜ್‌ಪುರ, ರಾಜಸ್ಥಾನದ ಪೋಖರಣ್‌ ಮತ್ತಿತರ ಕಡೆಗಳಲ್ಲಿ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಇವುಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಬ್ಲ್ಯಾಕ್ಔಟ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ