ಚೀನಾದಲ್ಲಿ ಕೋವಿಡ್‌ ಸುನಾಮಿಗೆ ಕಾರಣ ಏನು?

ಬುಧವಾರ, 21 ಡಿಸೆಂಬರ್ 2022 (11:56 IST)
ಬೀಜಿಂಗ್ : ವಿಶ್ವಕ್ಕೆ ಕೊರೊನಾ ಹಬ್ಬಿಸಿದ ಚೀನಾದಲ್ಲಿ ಈಗ ಸೋಂಕು ಮತ್ತೆ ಅಬ್ಬರಿಸುತ್ತಿದೆ. ಚೀನಾ ದೇಶ ಮತ್ತೊಮ್ಮೆ ಕೊರೊನಾ ಮಾರಿಗೆ ತತ್ತರಿಸಿದ್ದು, ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್ ಕೇಸ್ ದಾಖಲಾಗುತ್ತಿದೆ.

ಆಸ್ಪತ್ರೆಗಳೆಲ್ಲಾ ತುಂಬಿ ತುಳುಕುತ್ತಿದೆ. ಲಕ್ಷಾಂತರ ಮಂದಿ ನಲುಗಿ ಹೋಗಿದ್ದಾರೆ. ಬೀಜಿಂಗ್ನ ಸ್ಮಶಾನಗಳೆಲ್ಲ ಕೋವಿಡ್ ಶವಗಳಿಂದ ತುಂಬಿಹೋಗಿವೆ. ಪ್ರತಿದಿನ ಏನಿಲ್ಲ ಅಂದರೂ ಒಂದೊಂದು ಸ್ಮಶಾನಕ್ಕೆ ಕನಿಷ್ಠ 200 ಶವ ಬರುತ್ತಿವೆ ಎಂದು ವರದಿಯಾಗಿದೆ.

ಜನ ರಸ್ತೆ ರಸ್ತೆಯಲ್ಲಿ ಪ್ರಾಣಕಳೆದುಕೊಳ್ಳುವಂತಾಗಿದೆ. ಅಷ್ಟೇ ಅಲ್ಲದೇ ಮುಂದಿನ ಮೂರು ತಿಂಗಳಲ್ಲಿ ಚೀನಾದ ಶೇ.60ರಷ್ಟು ಜನರನ್ನು ಕೋವಿಡ್ ಹೆಮ್ಮಾರಿ ಆವರಿಸಲಿದೆ ಎಂದು ಪರಿಣಿತರು ಅಂದಾಜಿಸಿದ್ದಾರೆ.

ದೇಶದಲ್ಲಿ ಸದ್ಯ ಕೋವಿಡ್ನಿಂದ ಸಂಭವಿಸುತ್ತಿರುವ ಸಾವುಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಚೀನಾ ನಲುಗಿ ಹೋಗಿದೆ. ಸ್ಮಶಾನಗಳಲ್ಲಿ ಶವಗಳ ಅಂತ್ಯಸಂಸ್ಕಾರಕ್ಕೆ ಹಲವು ದಿನ ಕ್ಯೂ ನಿಲ್ಲಬೇಕಾದ ಪರಿಸ್ಥಿತಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ