ದಕ್ಷಿಣ ಕೋರಿಯಾದ ಸ್ಯಾಮ್ಸಂಗ್ ಕಂಪೆನಿ ತನ್ನ ನೌಕರರಲ್ಲಿ ಕ್ಷಮೆ ಕೇಳಿದ್ಯಾಕೆ?

ಬುಧವಾರ, 28 ನವೆಂಬರ್ 2018 (13:57 IST)
ದಕ್ಷಿಣ ಕೋರಿಯಾ : ದಕ್ಷಿಣ ಕೋರಿಯಾದ ಮೊಬೈಲ್ ತಯಾರಿಕಾ ಕಂಪನಿ ಹಾಗೂ ಚಿಪ್ ತಯಾರಕ ಕಂಪನಿ ಸ್ಯಾಮ್ಸಂಗ್ ಕೊನೆಗೂ ಕ್ಯಾನ್ಸರ್ ಪೀಡಿತ ನೌಕರರಿಗೆ ಪರಿಹಾರ ಘೋಷಣೆ ಮಾಡಿದೆ.


ಕಳೆದ ಕೆಲವು ವರ್ಷಗಳ ಹಿಂದೆ ಸ್ಯಾಮ್ಸಂಗ್ ಡಿಸ್ಪ್ಲೇ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುವ 240 ಕಾರ್ಮಿಕರು ಒಂದೇ ಬಾರಿ ಅನಾರೋಗ್ಯಕ್ಕೊಳಗಾಗಿದ್ದರು. ಅವರನ್ನು ಪರೀಕ್ಷೆ ಮಾಡಿದ ನಂತರ  ಕಾರ್ಮಿಕರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಂಬ ಸಂಗತಿ ಹೊರ ಬಿದ್ದಿತ್ತು. ಆಗ ಕಾರ್ಮಿಕರು ಹಾಗೂ ಸಿಬ್ಬಂದಿ ಕಂಪನಿ ನಿರ್ಲಕ್ಷ್ಯದಿಂದ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಆರೋಪ ಮಾಡಿದ್ದರು. ಆದರೆ ಇದನ್ನು ಒಪ್ಪಿಕೊಳ್ಳಲು ಕಂಪೆನಿ ತಯಾರಿರಲಿಲ್ಲ.


ಆದರೆ ಇದೀಗ ಹೊರಬಿದ್ದ ತನಿಖಾ ವರದಿಯ ಪ್ರಕಾರ ಕಾರ್ಖಾನೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಅಪಾಯಕಾರಿ ವಿಕಿರಣಗಳು ನೌಕರರನ್ನು ಕ್ಯಾನ್ಸರ್ ಗೆ ನೂಕಿವೆ ಎಂಬುದು ಬಹಿರಂಗವಾಗಿತ್ತು. ಈಗಾಗಲೇ 80 ಮಂದಿ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಇದೀಗ ಕಂಪನಿ ಘಟನೆ ಬಗ್ಗೆ ತಪ್ಪೊಪ್ಪಿಕೊಂಡು, ಕ್ಷಮೆ ಕೇಳಿದೆ, ಅಲ್ಲದೇ ಕಾರ್ಮಿಕರಿಗೆ 94 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ