ಬೆಂಗಳೂರು: ಎಚ್ಚರಿಕೆಯ ಬಳಿಕವು ನಿಷೇಧಿತ ಬಣ್ಣವನ್ನು ಆಹಾರ-ತಿನಿಸುಗಳಲ್ಲಿ ಬಳಸಿದ್ದಕ್ಕಾಗಿ ಬೆಂಗಳೂರಿನ 6 ಎಂಫೈರ್ ಹೊಟೇಲ್ ವಿರುದ್ಧಧ ಕೇಸ್ ದಾಖಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈಗಾಗಲೇ ಆಹಾರ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು, ನಂತರವೂ, ಬೆಂಗಳೂರಿನಲ್ಲಿ ಇತರೆ ಮಳಿಗೆಗಳಲ್ಲಿ ಸಂಗ್ರಹಿಸಲಾದ ಚಿಕನ್ ಕಬಾಬ್‌ನ ಮಾದರಿಗಳಲ್ಲಿ ನಿಷೇಧಿತ ಕೃತಕ ಬಣ್ಣ ಬಳಕೆ ಮಾಡಿರುವುದು ಕಂಡುಬಂದಿದೆ. ಈ ಬೆಳವಣಿಗೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಚಿಂತಿಸಿದೆ.
ನಗರದಾದ್ಯಂತ ಇರುವ ರೆಸ್ಟೋರೆಂಟ್‌ನ ಆರು ಮಳಿಗೆಗಳಿಂದ ಸಂಗ್ರಹಿಸಲಾದ ಮಾದರಿಗಳ ಫಲಿತಾಂಶಗಳು ಕಬಾಬ್‌ಗಳಲ್ಲಿ ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್ ಮತ್ತು ಟಾರ್ಟ್ರಾಜಿನ್ ಇರುವುದು ಕಂಡುಬಂದಿದೆ,
ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಆಹಾರ ಉತ್ಪನ್ನಗಳು ಮತ್ತು ವ್ಯಸನಕಾರಿ) ನಿಯಮಗಳು 2011 ರ ಪ್ರಕಾರ ಇವುಗಳನ್ನು ಬಳಸಬಾರದು ಎಂದು ತಿಳಿಸಿದೆ. ಇದು ಮಾನವ ಸೇವನೆಗೆ ಅಸುರಕ್ಷಿತ ಎಂದು ತಿಳಿಸಲಾಗಿದೆ. ಆದರೂ ನಿಷೇಧಿತ ಕೃತಕ ಬಣ್ಣಗಳನ್ನು ಬಳಕೆ ಮಾಡುತ್ತಿದ್ದಾರೆ.
ಚಿಕನ್ ಕಬಾಬ್‌ಗಳು ಮತ್ತು ಶವರ್ಮಾಗಳಿಗೆ ಹೆಸರುವಾಸಿಯಾದ ಪ್ರಮುಖ ಎಂಪೈರ್ ರೆಸ್ಟೋರೆಂಟ್‌ನಿಂದ ಸಂಗ್ರಹಿಸಲಾದ ತಿನಿಸಿನಲ್ಲೂ ಕೃತಕ ಬಣ್ಣ ಬಳಕೆ ಪತ್ತೆಯಾಗಿದೆ. ನಿಯಮ ಉಲ್ಲಂಘನೆ ಎರಡನೇ ಬಾರಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಎಂಪೈರ್ ರೆಸ್ಟೋರೆಂಟ್ ಗ್ರೂಪ್‌ಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.