ವಿಮಾನದ ಬಾತ್ ರೂಂನಲ್ಲೇ ಐಸೋಲೇಟ್ ಆದ ಮಹಿಳೆ!

ಶನಿವಾರ, 1 ಜನವರಿ 2022 (08:50 IST)
ನ್ಯೂಯಾರ್ಕ್: ಕೊರೋನಾ ಪಾಸಿಟಿವ್ ವರದಿ ಕೈ ಸೇರುವಾಗ ನಾವು ಯಾವ ಪರಿಸ್ಥಿತಿಯಲ್ಲಿರುತ್ತೇವೆ ಎಂದು ಹೇಳಲಾಗದು. ಇಂತಹದ್ದೇ ಒಂದು ವಿಚಿತ್ರ ಪರಿಸ್ಥಿತಿಯನ್ನು ಅಮೆರಿಕಾದ ಮಹಿಳೆಯೊಬ್ಬರು ಎದುರಿಸಿದ್ದಾರೆ.

ಮಿಚಿಗನ್ ನ ಶಿಕ್ಷಕಿಯಾಗಿರುವ ಮರಿಸಾ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ವಿಮಾನದ ಬಾತ್ ರೂಂಗೆ ತೆರಳಿ ರಾಪಿಡ್ ಟೆಸ್ಟ್ ಮಾಡಿದ್ದಾರೆ. ಈ ವೇಳೆ ವರದಿ ಪಾಸಿಟಿವ್ ಬಂದಿದೆ.

ವಿಮಾನ ಭರ್ತಿಯಾಗಿದ್ದರಿಂದ ಆಕೆಯನ್ನು ಪ್ರತ್ಯೇಕವಾಗಿ ಕೂರಿಸಲು ಸೀಟ್ ಇರಲಿಲ್ಲ. ಹೀಗಾಗಿ ಭಯಗೊಂಡಿದ್ದ ಆಕೆಯನ್ನು ವಿಮಾನದ ಬಾತ್ ರೂಂನಲ್ಲೇ ಐಸೋಲೇಟ್ ಮಾಡಲಾಯಿತು. ಬಳಿಕ ವಿಮಾನ ಲ್ಯಾಂಡ್ ಆದ ಮೇಲೆ ಎಲ್ಲರೂ ಇಳಿದಾದ ಬಳಿಕ ಮರಿಸಾರನ್ನು ಕರೆದೊಯ್ಯಲಾಯಿತು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ