ರೇಡಿಯೋ, ಟಿವಿಗಳಲ್ಲಿ ಮಹಿಳೆಯರ ಧ್ವನಿ ಕೇಳುವಂತಿಲ್ಲ: ತಾಲಿಬಾನಿಗಳ ಆದೇಶ

ಸೋಮವಾರ, 30 ಆಗಸ್ಟ್ 2021 (11:03 IST)
ಅಫ್ಘಾನಿಸ್ತಾನ : ಆಫ್ಘಾನಿಸ್ತಾನ ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನಿಗಳು ಒಂದೊಂದಾಗಿ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಇದೀಗ ಕಂದಹಾರ್ ನ ರೇಡಿಯೋ ಮತ್ತು ಟಿವಿ ಚಾನಲ್ಗಳಲ್ಲಿ ಮಹಿಳೆಯರ ಧ್ವನಿ, ಸಂಗೀತ ಕಾರ್ಯಕ್ರಮವನ್ನು ನಿಷೇಧಿಸಿದ್ದಾರೆ.

ನಾವು ಮಹಿಳೆಯರಿಗೆ ತೊಂದರೆ ಕೊಡುವುದಿಲ್ಲ. ಅವರ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಹೇಳಿದ್ದ ತಾಲಿಬಾನಿಗಳು ನಿಧಾನವಾಗಿ ಮಹಿಳೆಯರ ಮೇಲಿನ ಕಟ್ಟುಪಾಡು ಹೆಚ್ಚಿಸುತ್ತಿದ್ದಾರೆ.
ಆಗಸ್ಟ್ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಕೆಲವು ಸುದ್ದಿ ವಾಹಿನಿಗಳು ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನಿರೂಪಕರನ್ನು ಕೆಲಸದಿಂದ ತೆಗೆದಿದ್ದವು. ತಾಲಿಬಾನಿಗಳ ಕ್ರೂರ ಕಾನೂನಿಗೆ ಹೆದರಿ ಈ ನಿರ್ಧಾರ ಕೈಗೊಂಡಿದ್ದವು.
ಈ ಮಧ್ಯೆ ತಾಲಿಬಾನ್ ಉಗ್ರರು, ಮಹಿಳೆಯರನ್ನೂ ಕೆಲಸಕ್ಕೆ ಕರೆಯುತ್ತಿದ್ದಾರೆ. ಇಸ್ಲಾಮಿಕ್ ಕಾನೂನಿನಡಿ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ನೀಡುವುದಾಗಿ ತಾಲಿಬಾನಿಗಳು ಭರವಸೆ ಕೊಟ್ಟಿದ್ದಾರೆ ಎಂದೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಅದೆಲ್ಲದರ ಹೊರತಾಗಿಯೂ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಕಷ್ಟಪಡುತ್ತಿರುವ ಬಗ್ಗೆ ದಿನನಿತ್ಯವೂ ವರದಿಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ