ವಿದೇಶಿ ಐಟಿ ಉದ್ಯೋಗಿಗಳಿಗೆ ಅಮೇರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರ್ಮಾಘಾತ ನೀಡಿದ್ದಾರೆ.ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ.
ಈವರೆಗೆಹೆಚ್1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60ಸಾವಿರ ಡಾಲರ್ (40.69 ಲಕ್ಷ ರೂ.) ಇತ್ತು. ಮತ್ತೀಗ ವಿದೇಶಿ ಉದ್ಯೋಗಿಗಳಿಗೆ ಅನುಕೂಲವಾಗಿದ್ದ ಹೆಚ್1ಬಿ ವೀಸಾಗೆ ತಿದ್ದುಪಡಿ ಮಾಡಲಾಗಿದ್ದು, ಈ ವೀಸಾ ಪಡೆಯಬೇಕಾದರೆ ಕನಿಷ್ಠ 1,30,000 ಡಾಲರ್ ಸಂಬಳ ಹೊಂದಿರಬೇಕು ಎಂಬ ನಿಯಮವನ್ನು ಹೇರಲಾಗಿದೆ.
ಚಿಕ್ಕ ಚಿಕ್ಕ ಕೆಲಸಗಾರರಿಗೂ ಟ್ರಂಪ್ ಬಿಸಿ ತಟ್ಟಲಿದ್ದು, ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ಭಾರತೀಯ ನೌಕರರಿಗೆ ಬಹುದೊಡ್ಡ ಶಾಕ್ ನೀಡಿದಂತಾಗಿದೆ.
ಐಟಿಸಿಟಿ ಬೆಂಗಳೂರಿನ ಮೇಲೂ ಇದರ ಪರಿಣಾಮವಾಗುವುದು ಎಂದು ಹೇಳಲಾಗುತ್ತಿದೆ.
ಟ್ರಂಪ್ ಅವರ ಉದ್ದೇಶಿತ ಹೆಚ್-1ಬಿ ವೀಸಾ ನೀತಿ ಮರು ಪರಿಶೀಲನೆ ಹಿನ್ನೆಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆಯಲ್ಲಿ ಐಟಿ ವಲಯ ತಲ್ಲಣಿಸಿದ್ದು ಷೇರು ಮಾರುಕಟ್ಟೆ ಶೇ.9ರಷ್ಟು ಕುಸಿದಿದೆ.