ಬೆಂಗಳೂರು: ರಾಜ್ಯ ಸರ್ಕಾರ ಜಾತಿಗಣತಿ ಮಾಡಲು ಹೊರಟಿದ್ದು ಕ್ರಿಶ್ಚಿಯನ್ ಸಮುದಾಯದಲ್ಲಿ ಸೃಷ್ಟಿಸಿರುವ ಹೊಸ ಹೊಸ ಜಾತಿಗಳ ಹೆಸರುಗಳಿಗೆ ಬಿಜೆಪಿ ಕಡು ಟೀಕೆ ಮಾಡಿದೆ.
ರಾಜ್ಯ ಸರ್ಕಾರ ಈಗಾಗಲೇ ಜಾತಿಗಣತಿಗೆ ವಿವಿಧ ಸಮುದಾಯಗಳಲ್ಲಿರುವ ಜಾತಿಗಳ ಪಟ್ಟಿ ಮಾಡಿದೆ. ಆದರೆ ಕ್ರಿಶ್ಚಿಯನ್ ಸಮುದಾಯದಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್, ಲುಮಾಣಿ ಕ್ರಿಶ್ಚಿಯನ್ ಎಂದೆಲ್ಲಾ ಹೊಸ ಹೊಸ ಜಾತಿಗಳನ್ನು ಸೃಷ್ಟಿಸಲಾಗಿದೆ.
ಇದಕ್ಕೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ಕೇಳಿಬಂದಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ ಏಸು ಒಬ್ಬ, ಜಾತಿ ಹಲವು ! ಈ ಸರ್ಕಾರಕ್ಕೆ ಏನಾಗಿದೆ ಎಂದೇ ಅರ್ಥವಾಗುತ್ತಿಲ್ಲ. ಕ್ರೈಸ್ತರೊಳಗೆ ಇಷ್ಟು ಜಾತಿಗಳನ್ನು ಸೃಷ್ಟಿಸಿ ಏನು ಮಾಡಲು ಹೊರಟಿದೆ. ಸಾಂವಿಧಾನಿಕ ಮಾನ್ಯತೆ ಪಡೆದಿರುವ ಜಾತಿಗಳಿಗೆ ಕಾಂಗ್ರೆಸ್ ಸರ್ಕಾರದಿಂದ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಕ್ರೈಸ್ತರೊಳಗೆ ಇಷ್ಟು ಜಾತಿಗಳನ್ನು ಸೃಷ್ಟಿಸಿದ್ದೇಕೆ?
ಈ ಜಾತಿ ಲಿಸ್ಟ್ ಇಟಲಿಯಿಂದಲೋ, ವ್ಯಾಟಿಕನ್‌ನಿಂದಲೋ ಅಥವಾ ಯಾವ ಕಡೆಯಿಂದ ಬಂದಿದ್ದು ಎಂಬುದನ್ನು ಮಾನ್ಯ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದೆ.