500 ಕೆಜಿ ತೂಕದ ಈಜಿಫ್ಟಿನ ದಢೂತಿ ಮಹಿಳೆ ಎಮನ್ ಅಹಮದ್ ನಾಳೆ ಮುಂಬೈಗೆ ಬರುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಮನೆ ಬಿಟ್ಟು ಹೊರಬರದ ಈ ಮಹಿಳೆ ತೂಕ ಇಳಿಸಿಕೊಳ್ಳುವ ಶಸ್ತ್ರಚಿಕಿತ್ಸಗೆ ಮುಂಬೈಗೆ ಆಗಮಿಸುತ್ತಿದ್ದಾರೆ
ವಿಶ್ವದಲ್ಲೇ ಅತ್ಯಂತ ತೂಕದ ಮಹಿಳೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಎಮನ್ ಅವರಿಗೆ ಬ್ಯಾರಿಯಾಟ್ರಿಕ್ ಸರ್ಜನ್ ಮುಫಾಸಲ್ ಲಕ್ಡವಾಲಾ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡಲಿದೆ.
ಕಳೆದ 3 ತಿಂಗಳಿಂದ ಎಮನ್ ಸಂಪರ್ಕದಲ್ಲಿರುವ ವೈದ್ಯರ ತಂಡ ಬೇಕಾದ ಎಲ್ಲ ಮುಂಜಾಗ್ರತಾಕ್ರಮಗಳನ್ನ ಕೈಗೊಂಡಿದೆ. ಬೆಡ್ ಸಮೇತವಾಗಿ ಅಲೆಗ್ಸಾಂಡ್ರಿಯಾದಿಂದ ಇಲ್ಲಿಗೆ ಕರೆತರಲಾಗುತ್ತಿದೆ.