ಹಾಸಿಗೆ ಸಹಿತ ಮುಂಬೈಗೆ ಬಂದಿಳಿದ ವಿಶ್ವದ ದಢೂತಿ ಮಹಿಳೆ

ಶನಿವಾರ, 11 ಫೆಬ್ರವರಿ 2017 (11:58 IST)
500 ಕೆಜಿ ತೂಕದ ವಿಶ್ವದ ದಢೂತಿ ಮಹಿಳೆ, ಈಜಿಪ್ತಿನ ಎಮನ್ ಅಹಮದ್ ಮುಂಬೈ ತಲುಪಿದ್ದಾರೆ. ಕಳೆದ 25 ವರ್ಷಗಳಿಂದ ಮನೆ ಬಿಟ್ಟು ಹೊರಬರಲಾರದ ಸ್ಥಿತಿಯಲ್ಲಿ ಮಲಗಿದ್ದಲ್ಲೇ ಇರುವ ಈ ಮಹಿಳೆ ತೂಕ ಇಳಿಸಿಕೊಳ್ಳುವ ಶಸ್ತ್ರಚಿಕಿತ್ಸಗಾಗಿ ಭಾರತಕ್ಕೆ ಆಗಮಿಸಿದ್ದಾರೆ.
36 ವರ್ಷದ ಎಮನ್ ತಮ್ಮ ಸಹೋದರಿ ಶೈಮಾ ಅಹಮದ್ ಜತೆಯಲ್ಲಿ ಬೆಡ್ ಸಮೇತವಾಗಿ ಅಲೆಗ್ಸಾಂಡ್ರಿಯಾದಿಂದ ಬಂದಿದ್ದು ಅವರಿಗೆ ಬ್ಯಾರಿಯಾಟ್ರಿಕ್ ಸರ್ಜರಿ ಮತ್ತು ಇನ್ನಿತರ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಮುಫಾಸಲ್ ಲಕ್ಡವಾಲಾ ನೇತೃತ್ವದ ವೈದ್ಯ ತಂಡ ಎಮನ್ ಅವರ ಚಿಕಿತ್ಸೆಯಲ್ಲಿ ಪಾಲ್ಗೊಳ್ಳಲಿದೆ.
 
ಕಳೆದ 3 ತಿಂಗಳಿಂದ ಎಮನ್ ಸಂಪರ್ಕದಲ್ಲಿರುವ ವೈದ್ಯರ ತಂಡ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.
 
ವರದಿಗಳ ಪ್ರಕಾರ ಹುಟ್ಟಿದಾಗಿನಿಂದ ಎಮನ್ ಎಲಿಫಾಂಟಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿದ್ದು, ಹುಟ್ಟಿದಾಗ ಅವರ ತೂಕ 5 ಕೆಜಿಯಷ್ಟಿತ್ತು.
 

ವೆಬ್ದುನಿಯಾವನ್ನು ಓದಿ