ವಾಷಿಂಗ್ಟನ್ : ಗಗನಯಾತ್ರಿಗಳನ್ನು ಚಂದ್ರ, ಮಂಗಳ ಸೇರಿದಂತೆ ಅದರಾಚೆಗಿನ ಗ್ರಹಗಳೆಡೆಗೆ ಕಳುಹಿಸಲು ವಿನ್ಯಾಸಗೊಳಿಸಲಾದ ಹಾಗೂ ಇದುವರೆಗೆ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್ಶಿಪ್ನ ಮೊದಲ ಪರೀಕ್ಷಾ ಹಾರಾಟವನ್ನು ಸ್ಪೇಸ್ಎಕ್ಸ್ ಸೋಮವಾರ ಮುಂದೂಡಿದೆ.
ಬೂಸ್ಟರ್ ಹಂತದಲ್ಲಿ ಒತ್ತಡದ ಸಮಸ್ಯೆಯಿಂದಾಗಿ ಸ್ಟಾರ್ಶಿಪ್ ರಾಕೆಟ್ನ (ಖoಛಿಞeಣ) ಲಿಫ್ಟ್ಆಫ್ ಅನ್ನು ಉಡಾವಣೆಗೆ ನಿಗದಿಪಡಿಸಲಾಗಿದ್ದ ಸಮಯಕ್ಕಿಂತ ಕೆಲವೇ ನಿಮಿಷಗಳ ಮೊದಲು ಸ್ಥಗಿತಗೊಳಿಸಲಾಯಿತು ಎಂದು ಸ್ಪೇಸ್ಎಕ್ಸ್ನ ಅಧಿಕಾರಿಗಳು ತಿಳಿಸಿದ್ದಾರೆ.
ಟೆಕ್ಸಾಸ್ನ ಬೊಕಾ ಚಿಕಾದಲ್ಲಿರುವ ಸ್ಪೇಸ್ಎಕ್ಸ್ ಬಾಹ್ಯಾಕಾಶ ನಿಲ್ದಾಣವಾದ ಸ್ಟಾರ್ಬೇಸ್ನಿಂದ ಸ್ಥಳೀಯ ಕಾಲಮಾನ ಬೆಳಗ್ಗೆ 8:20ರ ವೇಳೆಗೆ ಸ್ಟಾರ್ಶಿಪ್ ಹಾರಾಟವನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ತಾತ್ಕಾಲಿಕವಾಗಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಕನಿಷ್ಠ 48 ಗಂಟೆ ವಿಳಂಬವಾಗಲಿದೆ ಎಂದು ಸ್ಪೇಸ್ಎಕ್ಸ್ ತಿಳಿಸಿದೆ.