ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ ಶಿಕ್ಷಕಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ

Sampriya

ಬುಧವಾರ, 20 ಆಗಸ್ಟ್ 2025 (13:01 IST)
Photo Credit X
ಭೋಪಾಲ್: 18 ವರ್ಷದ ಮಾಜಿ ವಿದ್ಯಾರ್ಥಿಯೊಬ್ಬ ಪ್ರೀತಿಯನ್ನು ನಿರಾಕರಿಸಿದ್ದ ಅತಿಥಿ ಶಿಕ್ಷಕಿಯ ಮೇಲೆ ಬೆಂಕಿ ಹಚ್ಚಿದ ಭಯಾನಕ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ. 

ಸೂರ್ಯಾಂಶ್ ಕೊಚಾರ್ ಎಂಬಾತ ಶಿಕ್ಷಕಿ ಮೇಲೆ ಬೆಂಕಿ ಹಚ್ಚಿದ ಆರೋಪಿ. ಘಟನೆಯಿಂದ 26 ವರ್ಷದ ಶಿಕ್ಷಕಿಗೆ ಶೇಕಡಾ 25 ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಜಬಲ್ಪುರ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ.

ಪೊಲೀಸರ ಪ್ರಕಾರ ಆರೋಪಿ ಪೆಟ್ರೋಲ್ ತುಂಬಿದ ಬಾಟಲಿಯನ್ನು ಹೊತ್ತುಕೊಂಡು ಶಿಕ್ಷಕಿಯ ಮನೆಗೆ ಹೋಗಿದ್ದಾನೆ. ಪೆಟ್ರೋಲ್‌ ಅನ್ನು ಅವಳ ಮೇಲೆ ಸುರಿದು, ಬೆಂಕಿ ಹಂಚಿದ್ದಾನೆ. ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಸ್ತುತ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸುಟ್ಟಗಾಯಗಳು ಗಂಭೀರವಾಗಿದ್ದರೂ ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.

ಆರೋಪಿ ಮತ್ತು ಶಿಕ್ಷಕಿ ಎರಡು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು. ಸೂರ್ಯಾಂಶು ಆಕೆಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ. ಆದರೆ, ಎರಡು ವರ್ಷಗಳ ಹಿಂದೆ ಶಿಕ್ಷಕಿ ಪಾಠ ಮಾಡುತ್ತಿದ್ದ ಶಾಲೆಯಿಂದ ಆರೋಪಿಯನ್ನು ಹೊರಹಾಕಲಾಗಿತ್ತು.

‌ಈ ಘಟನೆಯು ಶಿಕ್ಷಕಿಯು ಕೆಲಸ ಮಾಡುತ್ತಿದ್ದ ಉತ್ಕೃಷ್ಟ ಶಾಲೆಯ ಎಲ್ಲರನ್ನೂ ಆಘಾತಗೊಳಿಸಿದೆ. ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಗಳು ಮುಂದುವರೆದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ