ಝಲೆನ್ಸ್ಕಿ ಗಂಭೀರ ಆರೋಪ?

ಶನಿವಾರ, 4 ಜೂನ್ 2022 (10:16 IST)
ಕೀವ್ : ಉಕ್ರೇನ್ನಲ್ಲಿ ರಷ್ಯಾದ ಆಕ್ರಮಣವು 100ನೇ ದಿನ ಸಮೀಪಿಸುತ್ತಿದೆ.

ಈ ಹೊತ್ತಿನಲ್ಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಷ್ಯಾ ಸುಮಾರು 2 ಲಕ್ಷ ಮಕ್ಕಳನ್ನು ಬಲವಂತವಾಗಿ ಕರೆದೊಯ್ದಿದೆ, 1 ಕೋಟಿಗೂ ಅಧಿಕ ಜನರು ವಲಸೆ ಹೋಗುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.

ಅಂತಾರಾಷ್ಟ್ರೀಯ ಮಕ್ಕಳ ದಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಝಲೆನ್ಸ್ಕಿ, ರಷ್ಯಾದ ಕ್ರಿಮಿನಲ್ ಉದ್ದೇಶವು ಮಕ್ಕಳನ್ನು ಅಪಹರಣ ಮಾಡಿರುವುದು ಮಾತ್ರವಲ್ಲದೆ ವಲಸೆ ಹೋದವರು ಮತ್ತೆ ಉಕ್ರೇನ್ಗೆ ಮರಳದಂತೆ ಮಾಡಿದೆ. ಆದರೂ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ.

ನಮ್ಮ ಜನರು ಎಂದಿಗೂ ಶರಣಾಗುವುದಿಲ್ಲ. ನಮ್ಮ ದೇಶದ ಮಕ್ಕಳು ಆಕ್ರಮಣಕಾರರ ಆಸ್ತಿಯಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಯುದ್ಧದ ನಡುವೆ ರಷ್ಯಾದ ಪಡೆಗಳು ಪೂರ್ವ ಡೊನ್ಬಾಸ್ ಪ್ರದೇಶದ ಮೇಲೆ ತಮ್ಮ ಹಿಡಿತ ಗಟ್ಟಿಗೊಳಿಸುತ್ತಿವೆ. ಇದಕ್ಕೆ ಪ್ರತಿದಾಳಿ ನಡೆಸುತ್ತಿರುವ ಉಕ್ರೇನ್ ಸೈನ್ಯವೂ ವಾಸ್ತವಿಕ ಆಡಳಿತ ಕೇಂದ್ರವಾದ ಕ್ರಾಮಾಟೋರ್ಸ್ಕ್ ಕಡೆಗೆ ಸ್ಥಿರವಾಗಿ ಹಿಮ್ಮೆಟ್ಟಿಸುತ್ತಿವೆ.

ಕಳೆದ ಮೂರು ತಿಂಗಳಿನಿಂದ ರಷ್ಯಾದ ಆಕ್ರಮಣ 1.25 ಲಕ್ಷ ಚದರ ಕಿ.ಮೀ ವರೆಗೆ ಹೆಚ್ಚಾಗಿದೆ. ಸುಮಾರು 3 ಲಕ್ಷ ಕಿ.ಮೀ ಗಳಷ್ಟು ಸ್ಫೋಟಗೊಂಡ ಶಸ್ತ್ರಾಸ್ತ್ರಗಳಿಂದ ಕಲುಷಿತಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ