ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿ ಇಂದಿಗೆ 100 ದಿನ
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿ ಇಂದಿಗೆ 100 ದಿನ. ಕೆಲವೇ ದಿನಗಳಲ್ಲಿ ಉಕ್ರೇನ್ ಉಡೀಸ್ ಮಾಡುವ ವಿಶ್ವಾಸದಲ್ಲಿ ಮುನ್ನುಗ್ಗಿದ ರಷ್ಯಾಗೆ ಅಡಿಗಡಿಗೂ ಉಕ್ರೇನ್ ಇನ್ನಿಲ್ಲದಂತೆ ಕಾಡಿತು. ಸುಲಭದ ತುತ್ತಾಗುತ್ತೆ ಎಂದು ಭಾವಿಸಿದ್ದ ರಷ್ಯಾ ಅತಿಯಾದ ಆತ್ಮವಿಶ್ವಾಸಕ್ಕೆ ಅಮೆರಿಕಾ ತೆರೆಮರೆಯಲ್ಲೇ ಬಹುದೊಡ್ಡ ಪೆಟ್ಟುಕೊಟ್ಟಿತು. ಉಕ್ರೇನ್ಗೆ ನೆರವಿನ ಮಹಾಪೂರವೇ ಹರಿಸಿತು. ಆರಂಭದಲ್ಲಿ ಶಸ್ತ್ರಾಸ್ತ್ರ ಕೊರತೆ ಎದುರಿಸಿದ್ದ ಉಕ್ರೇನ್ ನಂತರ ದಿನಗಳಲ್ಲಿ ನ್ಯಾಟೋ ನೆರವಿನಿಂದ ರಷ್ಯಾಗೆ ಮಣ್ಣುಮುಕ್ಕಿಸುವಲ್ಲಿ ಯಶಸ್ವಿಯಾಯ್ತು. ಹೀಗಾಗಿ ರಷ್ಯಾ ತನ್ನ ರಣನೀತಿ ಬದಲಿಸಿಕೊಂಡು ಇಡೀ ಉಕ್ರೇನ್ ಆಕ್ರಮಿಸುವ ಬದಲಿಗೆ ಡಾನ್ ಬಾಸ್ ಪ್ರಾಂತ್ಯ ಕೈವಶಕ್ಕೆ ಮಾತ್ರ ಫೋಕಸ್ ಮಾಡಿದೆ. ಇದುವರೆಗೆ ರಷ್ಯಾ ಉಕ್ರೇನ್ನ ಶೇ. 20 ರಷ್ಟು ಭಾಗ ಮಾತ್ರ ಆಕ್ರಮಿಸಿದೆ. ಇದೇ ವೇಳೆ ಯುದ್ಧ ಇನ್ನಷ್ಟು ದಿನಗಳು ಮುಂದುವರೆಯುವ ಸಾಧ್ಯತೆಗಳಿದೆ. ಅಮೆರಿಕಾ ವಿರುದ್ಧ ಈಗಾಗಲೇ ಕೆರಳಿರುವ ರಷ್ಯಾ, ಉಕ್ರೇನ್ನಲ್ಲಿ ದಾಳಿಯನ್ನ ತೀವ್ರಗೊಳಿಸುವ ಸಾಧ್ಯತೆಗಳಿವೆ.