ಗ್ರಾಹಕರಿಗೆ ಗುಡ್‌ನ್ಯೂಸ್‌: ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಇಂದಿನಿಂದಲೇ ಕೊಂಚ ಅಗ್ಗ

Sampriya

ಶನಿವಾರ, 1 ನವೆಂಬರ್ 2025 (15:08 IST)
Photo Credit X
ಮುಂಬೈ:  ನವೆಂಬರ್‌ ತಿಂಗಳ ಮೊದಲ ದಿನವೇ ದೇಶದ ಜನತೆಗೆ ಗುಡ್‌ನ್ಯೂಸ್‌ ಸಿಕ್ಕಿದ್ದು, ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಳಿಕೆ ಮಾಡಲಾಗಿದ್ದು, ನವೆಂಬರ್ 1ರಿಂದಲೇ ನೂತನ ದರ ಜಾರಿಗೆ ಬಂದಿದೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿದ್ದು, ಇದರೊಂದಿಗೆ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಆಹಾರೋದ್ಯಮ ವಲಯಗಳಿಗೆ ಬಹುದೊಡ್ಡ ನಿರಾಳತೆ ದೊರೆತಂತಾಗಿದೆ. 

19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ನವೆಂಬರ್ 1 ರಿಂದ ರೂ. 4.5 ರಿಂದ ರೂ. 6.5 ವರೆಗೆ ಇಳಿಸಲಾಗಿದೆ. ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಈ ತಿಂಗಳು ಯಾವುದೇ ಬದಲಾವಣೆ ಆಗಿಲ್ಲ. ಈ ಬೆಲೆಗಳು ಏಪ್ರಿಲ್ 2025 ರಿಂದ ಸ್ಥಿರವಾಗಿಯೇ ಇವೆ.

ಅಕ್ಟೋಬರ್‌ನಲ್ಲಿ ಬೆಲೆ ಏರಿಕೆಯ ನಂತರ ನವೆಂಬರ್‌ನಲ್ಲಿ ಎಲ್‌ಪಿಜಿ ಬೆಲೆ ಕಡಿತವಾಗಿದೆ. ಕಳೆದ ತಿಂಗಳು, ದೆಹಲಿ ಮತ್ತು ಮುಂಬೈನಲ್ಲಿ ತಲಾ 15.5 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಇನ್ನು ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ದರವನ್ನು ತಲಾ 16.5 ರೂ.ಗಳಷ್ಟು ಹೆಚ್ಚಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ