ಚೀನಾದಲ್ಲಿ 1000 ಸಾವಿರಕ್ಕಿಂತಲೂ ಹೆಚ್ಚು ಮಕ್ಕಳ ಕಳ್ಳಸಾಗಣಿಕೆಗಾರರ ಬಂಧನ
ಶುಕ್ರವಾರ, 28 ಫೆಬ್ರವರಿ 2014 (13:34 IST)
PTI
ಅಂತರ್ಜಾಲದ ಮೂಲಕ ಕಳ್ಳಸಾಗಣೆಯಲ್ಲಿ ತೊಡಗಿದ್ದ ನಾಲ್ಕು ಗುಂಪುಗಳನ್ನು ಚೀನೀ ಪೊಲೀಸ್ ರು ಸೆರೆಹಿಡಿದಿದ್ದಾರೆ ಮತ್ತು 382 ಮಕ್ಕಳನ್ನು ಅವರ ಕಪಿಮುಷ್ಠಿಯಿಂದ ರಕ್ಷಿಸಲಾಗಿದೆ ಎಂದು ಎಂದು ಚೀನಾದ ಸಾರ್ವಜನಿಕ ಭದ್ರತಾ ಸಚಿವಾಲಯ ಹೇಳಿದೆ.
ಫೆಬ್ರವರಿ 19 ರಂದು ದೇಶಾದ್ಯಂತ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಟ್ಟು 1,094 ಶಂಕಿತರನ್ನು ಸೆರೆ ಹಿಡಿಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಗುಂಪುಗಳು ದತ್ತು ಅಥವಾ ಮರಳಿ ಮನೆಗೆ ಎಂಬ ಹೆಸರಿನ ಕೇಂದ್ರಗಳ ಅಡಿಯಲ್ಲಿ ಅಕ್ರಮ ಆನ್ಲೈನ್ ವೇದಿಕೆಗಳನ್ನು ಮತ್ತು ಅಂಗಡಿಗಳನ್ನು ಸ್ಥಾಪಿಸುವ ಮೂಲಕ ಶಿಶುಗಳ ವ್ಯಾಪಾರ ಮಾಡುತ್ತಿದ್ದರು ಎಂಬ ಆರೋಪವಿದೆ.
ಇತ್ತೀಚಿನ ವರ್ಷಗಳಲ್ಲಿ ಈ ಅಪರಾಧಿಗಳು ಇಂಟರ್ನೆಟ್ ಮೂಲಕ ಅಕ್ರಮ ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದವು. ಇದು ತನಿಖೆಗೆ ತೊಡಕಾಗಿತ್ತು ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಕ್ಸಿನ್ಹುಆ ವರದಿ ಮಾಡಿದೆ.
ಮಕ್ಕಳ ಕಳ್ಳಸಾಗಣೆ ಇತ್ತೀಚಿನ ವರ್ಷಗಳಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಕೆಲ ಸಂಘಟಿತ ಗುಂಪುಗಳು ಮಕ್ಕಳನ್ನು ಕದ್ದು ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡುತ್ತಾರೆ ಅಥವಾ ಭಿಕ್ಷಾಟನೆ ಮತ್ತು ವಿವಿಧ ಅಪರಾಧಗಳಿಗೆ ಅವರನ್ನು ದೂಡುತ್ತಾರೆ.