‘ವಿರಾಟ್ ಕೊಹ್ಲಿ ತಮ್ಮ ಮುಖ ಕನ್ನಡಿಯಲ್ಲಿ ನೋಡಿಕೊಳ್ಳಲಿ’

ಶನಿವಾರ, 6 ಮೇ 2017 (14:01 IST)
ಮುಂಬೈ: ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಆಧಾರ ಸ್ತಂಭ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇತ್ತೀಚೆಗಿನ ಅವರ ಫಾರ್ಮ್ ಭಾರೀ ಟೀಕೆಗೆ ಗುರಿಯಾಗಿದೆ.

 
ಭಾರತ ಕ್ರಿಕೆಟ್ ತಂಡಕ್ಕೆ ಅದೆಷ್ಟೋ ಗೆಲುವು ಕೊಡಿಸಿದ್ದ ಕೊಹ್ಲಿ ಇತ್ತೀಚೆಗೆ ಅದೇಕೋ ಕಳಪೆ ಫಾರ್ಮ್ ನಲ್ಲಿದ್ದಾರೆ. ಹೀಗಾಗಿ ಕೊಹ್ಲಿ ಫಾರ್ಮ್ ನ ಬಗ್ಗೆ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಖಾರವಾಗಿ ಮಾತನಾಡಿದ್ದಾರೆ.

‘ಮೊತ್ತ ಮೊದಲು ಕೊಹ್ಲಿ ಮಾಡಬೇಕಾಗಿರುವುದು ಅವರ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಬೇಕು. ತಾವೇನು ತಪ್ಪು ಮಾಡುತ್ತಿದ್ದೇವೆ ಎಂದು ತಿಳಿದುಕೊಳ್ಳಬೇಕು. ಪಂಜಾಬ್ ವಿರುದ್ಧ, ಕೋಲ್ಕೊತ್ತಾ ವಿರುದ್ಧ ಅವರು ಹೊಡೆದ ಶಾಟ್ ಗಳು ತೀರಾ ಕಳಪೆಯಾಗಿತ್ತು’ ಎಂದು ಗವಾಸ್ಕರ್ ಕಿಡಿ ಕಾರಿದ್ದಾರೆ.

ಅವರು ನಾಯಕ ಎನ್ನುವುದನ್ನು ಮರೆತು ಆಡುತ್ತಿದ್ದಾರೆ. ತಂಡ ಕುಸಿಯುತ್ತಿರುವಾಗ ಅವರೇ ತಂಡವನ್ನು ಆಧರಿಸಬೇಕು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ