ಬೆಂಗಳೂರು: ಕ್ರಿಕೆಟ್ ಮೈದಾನದಲ್ಲಿ ಎಷ್ಟೇ ಕಚ್ಚಾಟಗಳಾದರೂ ಕೆಲವೊಮ್ಮೆ ಜೆಂಟಲ್ ಮೆನ್ ಆಟಗಾರರ ನಡುವಳಿಕೆ ಮೆಚ್ಚುಗೆಗೆ ಪಾತ್ರವಾಗುವುದಿದೆ. ಅದೇ ರೀತಿ ನಿನ್ನೆ ಪಂಜಾಬ್ ಮತ್ತು ಬೆಂಗಳೂರು ನಡುವೆ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಇಂತಹದ್ದೇ ಘಟನೆ ನಡೆದಿದೆ.
ಈ ಪಂದ್ಯದಲ್ಲಿ ಪಂಜಾಬ್ ನ ಹಶೀಮ್ ಆಮ್ಲಾ ಹೆಚ್ಚು ರನ್ ಮಾಡಲಿಲ್ಲ. ಆದರೆ ವೀಕ್ಷಕರ ಹೃದಯ ಗೆಲ್ಲುವಲ್ಲಿ ಸಫಲರಾದರು. ಅನಿಕೇತ್ ಚೌದರಿ ಬೌಲಿಂಗ್ ನಲ್ಲಿ ಬಾಲ್ ಅವರ ಬ್ಯಾಟ್ ಗೆ ಸವರಿಕೊಂಡು ಕೀಪರ್ ಕೈ ಸೇರಿತು.
ಫೀಲ್ಡರ್ ಗಳು ಅಪೀಲ್ ಮಾಡಿರಲಿಲ್ಲ. ಅಂಪಾಯರ್ ಮಿಸುಕಾಡಲಿಲ್ಲ. ಹಾಗಿದ್ದರೂ ಆಮ್ಲಾ ತಾವಾಗೇ ಹೊರ ನಡೆದು ದೊಡ್ಡತನ ಮೆರೆದರು. ಇದು ಉಭಯ ತಂಡದ ಆಟಗಾರರ ಮೆಚ್ಚುಗೆಗೆ ಪಾತ್ರವಾಯಿತು.
ಕಳೆದ ಪಂದ್ಯದಲ್ಲಿ ಇದೇ ಅನಿಕೇತ್ ಬೌಲಿಂಗ್ ನಲ್ಲಿ ಧೋನಿ ಔಟಾದಾಗ ಅಂಪಾಯರ್ ತೀರ್ಪಿಗೂ ಕಾಯದೇ ಹೊರ ನಡೆದಿದ್ದರು. ಇದೀಗ ಹಶೀಮ್ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ