ಐಪಿಎಲ್: ಮುಂಬೈ ಇಂಡಿಯನ್ಸ್ ಹೃದಯ ಬಡಿತ ಹೆಚ್ಚಿಸಿದ ಜೋಸ್ ಬಟ್ಲರ್!

ಶುಕ್ರವಾರ, 21 ಏಪ್ರಿಲ್ 2017 (07:21 IST)
ಇಂದೋರ್: ಹಶೀಮ್ ಆಮ್ಲಾ ಶತಕದ ವೈಭವ ನೋಡಿ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಗೆದ್ದೇ ಗೆಲ್ಲುತ್ತದೆ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ ಪ್ರೇಕ್ಷಕರು ಉಸಿರು ಬಿಗಿ ಹಿಡಿವಂತೆ ಮಾಡಿದ್ದು ಜೋಸ್ ಬಟ್ಲರ್.

 
ಅವರ ಬಿರುಗಾಳಿಯಂತಹ ಇನಿಂಗ್ಸ್ ಮುಂದೆ, 198 ರನ್ ಗಳ ಮೊತ್ತ ಕೂಡಾ ಸಾಧಾರಣವೆನಿಸಿತು. ಕೇವಲ 37 ಎಸೆತಗಳಲ್ಲಿ 77 ರನ್ ಚಚ್ಚಿದ ಬಟ್ಲರ್ ಮುಂಬೈ ತಂಡಕ್ಕೆ ಕೇವಲ 15.3 ಓವರ್ ಗಳಲ್ಲಿ 8 ವಿಕೆಟ್ ಗಳ ಜಯ ಕೊಡಿಸಿಯೇ ಬಿಟ್ಟರು.

ಅತ್ತ ಪಂಜಾಬ್ ನಿರಾಸೆ ಅನುಭವಿಸಿದರೆ, ಮುಂಬೈ ಸತತ ಐದನೇ ಗೆಲುವಿನಲ್ಲಿ ಬೀಗತು. ಬಟ್ಲರ್ ತಮ್ಮ 77 ರನ್ ಳ ಇನಿಂಗ್ಸ್ ನಲ್ಲಿ ಏಳು ಬೌಂಡರಿ ಮತ್ತು ಐದು ಸಿಕ್ಸರ್ ಸಿಡಿಸಿದ್ದರು. ಅಲ್ಲಿಗೆ ಅವರ ಇನಿಂಗ್ಸ್ ಎಷ್ಟು ಆಕ್ರಮಣಕಾರಿಯಾಗಿತ್ತು ಎನ್ನುವುದನ್ನು ಲೆಕ್ಕಾಚಾರ ಹಾಕಬಹುದು. ಈ ಗೆಲುವಿನೊಂದಿಗೆ ಮುಂಬೈ 6 ಪಂದ್ಯಗಳಿಂದ 5 ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಿಯಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ