ಐಪಿಎಲ್: ಕೆಕೆಆರ್ ನಲ್ಲಿ ನಿಲ್ಲದ ಒಳಜಗಳ, ಅಸಮಾಧಾನ ಹೊರಹಾಕಿದ ರಸೆಲ್ ಗೆ ತಿರುಗೇಟು ಕೊಟ್ಟ ದಿನೇಶ್ ಕಾರ್ತಿಕ್

ಮಂಗಳವಾರ, 30 ಏಪ್ರಿಲ್ 2019 (08:29 IST)
ಕೋಲ್ಕೊತ್ತಾ: ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಸತತ ಸೋಲಿನ ಜತೆಗೆ ಒಳಜಗಳದಿಂದಾಗಿ ಬೇಸತ್ತಿದೆ. ಮೊನ್ನೆಯಷ್ಟೇ ಪ್ರಮುಖ ಆಟಗಾರ ಆಂಡ್ರೆ ರೆಸೆಲ್ ಬಹಿರಂಗವಾಗಿಯೇ ಅಸಮಧಾನ ಹೊರಹಾಕಿದ್ದರು.


ತಂಡ ಬೌಲಿಂಗ್ ಸಂಯೋಜನೆ, ತೀರ್ಮಾನಗಳು ಸರಿಯಿಲ್ಲದೇ ಇರುವುದಕ್ಕೇ ಸೋಲುತ್ತಿದ್ದೇವೆ ಎಂದು ರಸೆಲ್ ಹೇಳಿದ್ದು ತಂಡದೊಳಗಿನ ಒಡಕು ಬಹಿರಂಗಪಡಿಸಿತ್ತು.

ಇದೀಗ ನಾಯಕ ದಿನೇಶ್ ಕಾರ್ತಿಕ್ ರಸೆಲ್ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ್ದು, ‘ನಮ್ಮ ತಂಡದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಹಾಗಿದ್ದೂ ಯಾರೂ ಬೆನ್ನ ಹಿಂದೆ ತಮಾಷೆ ನೋಡುವವರು ಮತ್ತು ಕುಕ್ಕುವವರು ಇರಲ್ಲ ಎಂದುಕೊಳ್ಳುತ್ತೇನೆ’ ಎಂದು ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ