ಐಪಿಎಲ್: ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಕೊಟ್ಟ ಲಸಿತ್ ಮಲಿಂಗಾ
ಶ್ರೀಲಂಕಾ ವಿಶ್ವಕಪ್ ತಂಡಕ್ಕೆ ಆಯ್ಕೆಯ ಮಾನದಂಡವೆಂದೇ ಪರಿಗಣಿಸಲಾದ ಶ್ರೀಲಂಕಾ ಪ್ರಾಂತೀಯ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಮಲಿಂಗಾ ಆಡಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಹೀಗಾಗಿ ಐಪಿಎಲ್ ನ ಮೊದಲ ಆರು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. 2 ಕೋಟಿ ರೂ.ಗೆ ಮಲಿಂಗಾರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಕಳೆದ ಕೆಲವು ಆವೃತ್ತಿಯಿಂದ ಮಲಿಂಗಾ ಮುಂಬೈ ಇಂಡಿಯನ್ಸ್ ಪರವೇ ಆಡುತ್ತಿದ್ದಾರೆ.