ಮುಂದಿನ ಐಪಿಎಲ್ ಗೆ ಧೋನಿ ನಾಯಕತ್ವ ಬದಲು ಸುದ್ದಿಗೆ ಸಿಎಸ್ ಕೆ ಸಿಇಒ ಸ್ಪಷ್ಟನೆ

ಮಂಗಳವಾರ, 27 ಅಕ್ಟೋಬರ್ 2020 (11:21 IST)
ದುಬೈ: ಈ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಪ್ರದರ್ಶನ ನೀಡಿದ್ದರಿಂದ ಬೇಸತ್ತು ಆಡಳಿತ ಮಂಡಳಿ ಅವರನ್ನು ಮುಂದಿನ ಐಪಿಎಲ್ ವೇಳೆಗೆ ನಾಯಕತ್ವದಿಂದ ಮುಕ್ತಗೊಳಿಸಬಹುದೇ ಎಂಬ ಅನುಮಾನಗಳಿಗೆ ಸಿಇಒ ವಿಶ್ವನಾಥನ್ ಸ್ಪಷ್ಟನೆ ನೀಡಿದ್ದಾರೆ.


ಧೋನಿ ನಾಯಕತ್ವ ಬದಲಾವಣೆ ಕುರಿತಂತೆ ಹಬ್ಬಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿರುವ ಸಿಎಸ್ ಕೆ ಸಿಇಒ ವಿಶ್ವನಾಥನ್ ಮುಂದಿನ ಐಪಿಎಲ್ ಗೂ ಧೋನಿಯೇ ನಮ್ಮ ನಾಯಕ ಎಂದಿದ್ದಾರೆ. ಅವರ ನಾಯಕತ್ವದಲ್ಲಿ ಸಿಎಸ್ ಕೆ ಮೂರು ಬಾರಿ ಚಾಂಪಿಯನ್ ಆಗಿದೆ. ಒಂದು ಬಾರಿ ವಿಫಲವಾಗಿದೆ ಎಂದ ಮಾತ್ರಕ್ಕೆ ಅವರ ನಾಯಕತ್ವವನ್ನೇ ಬದಲಾವಣೆ ಮಾಡಲಾಗದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ