ಐಪಿಎಲ್ 13: ಕೊನೆಗೂ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್

ಬುಧವಾರ, 14 ಅಕ್ಟೋಬರ್ 2020 (09:01 IST)
ದುಬೈ: ಐಪಿಎಲ್ 13 ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆಗೂ ಗೆದ್ದು ನಿಟ್ಟುಸಿರು ಬಿಟ್ಟಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 20 ರನ್ ಗಳ ಗೆಲುವು ಕಂಡಿದೆ.

 

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಶೇನ್ ವ್ಯಾಟ್ಸನ್ 47, ಅಂಬಟಿ ರಾಯುಡು 41 ರನ್ ಗಳಿಸಿದರು. ಕೊನೆಯ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಅಜೇಯ 25 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್ ಪರ ಕೇನ್ ವಿಲಿಯಮ್ಸನ್ 57 ರನ್ ಗಳಿಸಿದರೆ ಜಾನಿ ಬೇರ್ ಸ್ಟೋ 23 ರನ್ ಗಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ