ಈ ವರ್ಷದ ದುಬಾರಿ ಐಪಿಎಲ್ ಆಟಗಾರ ಇವರೇ ಎಂದ ಆಶಿಶ್ ನೆಹ್ರಾ

ಗುರುವಾರ, 18 ಫೆಬ್ರವರಿ 2021 (11:39 IST)
ಚೆನ್ನೈ: ಐಪಿಎಲ್ 14 ಕ್ಕೆ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ವರ್ಷದ ಆಟಗಾರರಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ದುಬಾರಿ ಆಟಗಾರರಾಗಿ ಹೊರಹೊಮ್ಮಬಹುದು ಎಂದು ಮಾಜಿ ವೇಗಿ ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.


ಶಕೀಬ್ ಮೂಲ ಬೆಲೆ 2 ಕೋಟಿ ರೂ. ಅವರು ಬ್ಯಾಟ್ ಮತ್ತು ಬೌಲಿಂಗ್ ಎರಡರಲ್ಲೂ ಉಪಯುಕ್ತ ಕಾಣಿಕೆ ಸಲ್ಲಿಸುತ್ತಾರೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳಿಗೂ ಅವರು ಬೇಡಿಕೆಯ ಆಟಗಾರರಾಗಲಿದ್ದಾರೆ. ಹೀಗಾಗಿ ಅವರನ್ನು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಬಹುದು ಎಂದು ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ