ಬಿಸಿಸಿಐನ ಮಿನಿ-ಐಪಿಎಲ್ ಯೋಜನೆಗೆ ಪೆಟ್ಟು: ನಾಲ್ಕು ಕ್ರಿಕೆಟ್ ಮಂಡಳಿಗಳ ವಿರೋಧ

ಶನಿವಾರ, 16 ಜುಲೈ 2016 (13:49 IST)
ಮಿನಿ ಐಪಿಎಲ್ ಆಯೋಜಿಸುವ ಬಿಸಿಸಿ ಪ್ರಸ್ತಾವನೆಗೆ ಎಡಿನ್‌‌ಬರ್ಗ್ ಐಸಿಸಿಯ ನಾಲ್ಕು ಮಂಡಳಿಗಳು ಪ್ರಬಲವಾಗಿ ಆಕ್ಷೇಪಿಸುವ ಮೂಲಕ ಆಶ್ಚರ್ಯಕರ ತಿರುವು ಪಡೆದುಕೊಂಡಿದೆ. ಕಳೆದ ತಿಂಗಳು ಅನುರಾಗ್ ಠಾಕುರ್ ಮಂಡಿಸಿದ ಮಿನಿ ಐಪಿಎಲ್ ಕಲ್ಪನೆಗೆ ಕ್ರಿಕೆಟ್ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ ವಿರೋಧಿಸಿದೆ.
 
ಭಾರತದ ಮಂಡಳಿ ವಿದೇಶಿ ಐಪಿಎಲ್ ನಡೆಸಲು ಬಯಸಿದ್ದರೆ, ಐಸಿಸಿ ವಿಶ್ವ ಟಿ20ಯನ್ನು ಆ ಅವಧಿಯಲ್ಲಿ ನಿರ್ವಹಿಸಲು ಯೋಜಿಸಿದ್ದು, ಎರಡು ವರ್ಷಗಳಿಗೊಮ್ಮೆ ವಿಶ್ವ ಟಿ 20 ಟೂರ್ನಿಯನ್ನು ಪರಿವರ್ತಿಸಲು ಬಯಲಿದೆ.  ಇದು ನಿಜವಾಗಿದ್ದರೆ ಬಿಸಿಸಿಐ ನಿರ್ವಹಿಸುವ ಆಡಳಿತ ಮಂಡಳಿ ಸದಸ್ಯರಿಗೆ ವೈಯಕ್ತಿಕ ಮುಜುಗರ ಎಂದು ಮೂಲವೊಂದು ಸುದ್ದಿಪತ್ರಿಕೆಗೆ ತಿಳಿಸಿದೆ.
 
ಠಾಕುರ್ ಮತ್ತು ಶಶಾಂಕ್ ಮನೋಹರ್ ಒಂದೇ ಮಾರ್ಗದಲ್ಲಿಲ್ಲ ಎಂದೂ ವರದಿ ತಿಳಿಸಿದ್ದು, ಶಶಾಂಕ್ ಐಸಿಸಿ ಮೀಟಿಂಗ್ ಸಂದರ್ಭದಲ್ಲಿ ವಿದೇಶಿ ಐಪಿಎಲ್ ನಡೆಸುವುದನ್ನು ಚರ್ಚಿಸುವುದಕ್ಕೆ ಕೂಡ ನಿರಾಕರಿಸಿದರೆಂದು ತಿಳಿದುಬಂದಿದೆ. ಬಿಸಿಸಿಐ ನಿಲುವನ್ನು ಇತರೆ ಕ್ರಿಕೆಟ್ ಮಂಡಳಿ ವಿರೋಧಿಸುತ್ತಿರುವುದು ಇದೇ ಮೊದಲ ಬಾರಿಯೆಂದು ಹೇಳಲಾಗಿದೆ. ಠಾಕುರ್ ಮತ್ತು ಬಳಗ ಈ ವಿಷಯವನ್ನು ಹೇಗೆ ನಿಭಾಯಿಸುತ್ತಾರೆನ್ನುವುದು ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ