ದೇವದತ್ತ್ ಪಡಿಕ್ಕಲ್ ಗೆ ಈ ಐಪಿಎಲ್ ಮಹತ್ವ ಯಾಕೆ ಗೊತ್ತಾ?

ಶುಕ್ರವಾರ, 2 ಏಪ್ರಿಲ್ 2021 (09:11 IST)
ಚೆನ್ನೈ: ಈ ಬಾರಿಯ ಐಪಿಎಲ್ ದೇವದತ್ತ್ ಪಡಿಕ್ಕಲ್ ಪಾಡಿಗೆ ವಿಶೇಷವಾಗಿರಲಿದೆ. ಕಾರಣ, ಈ ಬಾರಿಯೂ ಉತ್ತಮ ಪ್ರದರ್ಶನ ಕೊಟ್ಟರೆ ದೇವದತ್ತ್ ಪಡಿಕ್ಕಲ್ ಗೆ ರಾಷ್ಟ್ರೀಯ ತಂಡಕ್ಕೆ ಅವಕಾಶ ಸಿಗಬಹುದು.


ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ಸಿಗುತ್ತಿದೆ. ಕಳೆದ ಐಪಿಎಲ್ ನಲ್ಲಿ ಮಿಂಚಿದ್ದ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದರು.

ಈಗ ದೇವದತ್ತ್ ಪಡಿಕ್ಕಲ್ ಸರದಿ. ಕಳೆದ ಆವೃತ್ತಿಯಲ್ಲಿ ಆರಂಭಿಕರಾಗಿ ಆರ್ ಸಿಬಿ ಪರ ದೇವದತ್ತ್ ಪಡಿಕ್ಕಲ್ ನಿಯಮಿತವಾಗಿ ರನ್ ಗಳಿಸಿದ್ದರು. ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲೂ ಪಡಿಕ್ಕಲ್ ದಾಖಲೆಯ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರು ಐಪಿಎಲ್ ನಲ್ಲೂ ಅತ್ಯುತ್ತಮ ಫಾರ್ಮ್ ಮುಂದುವರಿಸಿದರೆ ಮುಂಬರುವ ಸರಣಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ