ಐಪಿಎಲ್ ಕುರಿತ ಸಭೆ ಇಂದು: ಚೀನಾ ಸ್ಪಾನ್ಸರ್ ಬಗ್ಗೆ ನಿರ್ಧಾರ ಸಾಧ್ಯತೆ

ಭಾನುವಾರ, 2 ಆಗಸ್ಟ್ 2020 (09:07 IST)
ಮುಂಬೈ: ಐಪಿಎಲ್ 13 ಆಯೋಜಿಸಲು ಹೊರಟಿರುವ ಬಿಸಿಸಿಐ ಇದರ ಸಿದ್ಧತೆ ವೇಳಾಪಟ್ಟಿ ಇತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಸಲು ಇಂದು ಮಹತ್ವದ ಸಭೆ ನಡೆಸಲಿದೆ.


ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ನೇತೃತ್ವದಲ್ಲಿ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಯುಎಇನಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಹಾಗೂ ಐಪಿಎಲ್ ನಲ್ಲಿ ಚೀನಾ ಕಂಪನಿಗಳ ಸ್ಪಾನ್ಸರ್ ಶಿಪ್ ಬಗ್ಗೆ ನಿರ್ಧಾರವಾಗಲಿದೆ.

ವಿವೋ, ಬೈಜುಸ್,  ಡ್ರೀಮ್ 11, ಪೇಟಿಎಂ ಸೇರಿದಂತೆ ಸುಮಾರು 440 ಕೋಟಿ ರೂ. ಚೀನಾ ಕಂಪನಿಗಳ ಜತೆ ಬಿಸಿಸಿಐ ಒಪ್ಪಂದವಿದೆ. ಸದ್ಯಕ್ಕೆ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿಯಿರುವುದರಿಂದ ಈ ಕುರಿತು ಚರ್ಚೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ