ಮುಂಬೈ: ಐಪಿಎಲ್ 14 ಕ್ಕೆ ಬಿಸಿಸಿಐ ಈಗಾಗಲೇ ತಯಾರಿ ಆರಂಭಿಸಿದೆ. ಆಟಗಾರರ ಹರಾಜು ಪ್ರಕ್ರಿಯೆಯೂ ಮುಗಿದಿದೆ. ಆದರೆ ಪಂದ್ಯಗಳು ನಡೆಯೋದು ಎರಡೇ ಮೈದಾನದಲ್ಲಿ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಕೊರೋನಾ ಕಾರಣದಿಂದಾಗಿ ಕಳೆದ ಆವೃತ್ತಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಈ ವರ್ಷ ಭಾರತದಲ್ಲೇ ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಆದರೆ ಮುಂಬೈ ಮತ್ತು ಅಹಮ್ಮದಾಬಾದ್ ನ ಬೃಹತ್ ಕ್ರೀಡಾಂಗಣ ಮೊಟೇರಾದಲ್ಲಿ ಮಾತ್ರವೇ ಎಲ್ಲಾ ಪಂದ್ಯಗಳು ನಡೆಯಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಬಿಸಿಸಿಐ ಈ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ.