ಐಪಿಎಲ್: ಹರಾಜಿಗಿದ್ದಾರೆ ಪ್ರಮುಖ ಆಟಗಾರರು!

ಶನಿವಾರ, 17 ನವೆಂಬರ್ 2018 (09:36 IST)
ಮುಂಬೈ: ಕಳೆದ ಬಾರಿ ಹೆಚ್ಚು ರನ್, ವಿಕೆಟ್ ಗಳಿಸದ ಪ್ರಮುಖ ಆಟಗಾರರನ್ನು ಈ ಬಾರಿ ಐಪಿಎಲ್ ಆವೃತ್ತಿಯಲ್ಲಿ ಆಯಾ ಫ್ರಾಂಚೈಸಿಗಳು ತಂಡದಿಂದ ಕೈಬಿಡಲು ತೀರ್ಮಾನಿಸಿವೆ. ಹೀಗಾಗಿ ಈ ಬಾರಿ ಹರಾಜಿಗೆ ಒಳಪಡುವ ಪ್ರಮುಖ ಆಟಗಾರರನ್ನು ಪಟ್ಟಿ ಮಾಡಲಾಗಿದೆ.

ಪಟ್ಟಿಯಲ್ಲಿರುವ ಭಾರತದ ಪ್ರಮುಖ ಆಟಗಾರರೆಂದರೆ ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಎನ್ನಲಾಗಿದೆ. ಗಂಭೀರ್ ಕಳೆದ ಬಾರಿ ಕೆಕೆಆರ್ ನಿಂದ ದೆಹಲಿ ಪರ ಆಡಿದ್ದರು. ಯುವರಾಜ್ ಸಿಂಗ್ ತಮ್ಮ ತವರು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿ ತೀರಾ ಹೀನಾಯ ಪ್ರದರ್ಶನ ನೀಡಿದ್ದರು. ಈ ಹಿನ್ನಲೆಯಲ್ಲಿ ಇಬ್ಬರನ್ನೂ ಆಯಾ  ಫ್ರಾಂಚೈಸಿಗಳು ಈ ಬಾರಿ ಕೈಬಿಡುವ ಸಾಧ್ಯತೆ ದಟ್ಟವಾಗಿದೆ.

ಉಳಿದಂತೆ ನ್ಯೂಜಿಲೆಂಡ್ ಮೂಲದ ಬ್ರೆಂಡಮ್ ಮೆಕ್ಕಲಮ್ ಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಿಂದ ಕೊಕ್ ಸಿಗುವ ಸಾಧ್ಯತೆಯಿದೆ. ಶಿಖರ್ ಧವನ್ ಈಗಾಗಲೇ ಹೈದರಾಬಾದ್ ಬಿಟ್ಟು ಡೆಲ್ಲಿ ಡೇರ್ ಡೆವಿಲ್ಸ್ ಸೇರಿಕೊಂಡಿದ್ದಾರೆ. ಇನ್ನು, ಮುಂಬೈ ಇಂಡಿಯನ್ಸ್ ತಂಡದ ಜೆಪಿ ಡುಮಿನಿ, ಕೆಕೆಆರ್ ನ ಮಿಚೆಲ್ ಸ್ಟಾರ್ಕ್ ಗೂ ಹೊಸದಾಗಿ ಹರಾಜು ಪ್ರಕ್ರಿಯೆಗೆ ಒಳಗಾಗಬೇಕಾದ ಅನಿವಾರ್ಯತೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ