ಐಪಿಎಲ್‌: ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಕೋಲ್ಕತ್ತ ರೈಡರ್ಸ್ ಬ್ಯಾಟಿಂಗ್ ಆಯ್ಕೆ

Sampriya

ಬುಧವಾರ, 3 ಏಪ್ರಿಲ್ 2024 (19:42 IST)
Photo Courtesy X
ವಿಶಾಖಪಟ್ಟಣ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಇಂಡಿನ ಪಂದ್ಯಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತ ನೈಟ್ ರೈಸರ್ಡ್ ಮುಖಾಮುಖಿಯಾಗಲಿದೆ.

ಟಾಸ್ ಗೆದ್ದಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಕೆಕೆಆರ್ ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈಗ ಸತತ ಮೂರನೇ ಗೆಲುವಿನ ಇರಾದೆಯಲ್ಲಿದ್ದು, ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.  ಮತ್ತೊಂದೆಡೆ ಡೆಲ್ಲಿ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಎರಡರಲ್ಲಿ ಸೋಲು ಅನುಭವಿಸಿ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಏಳನೇ ಸ್ಥಾನದಲ್ಲಿದೆ.

ಇಂದು ನಡೆಯುವ ಪಂದ್ಯಾಟದಲ್ಲಿ ಯಾರು ಗೆಲುವನ್ನು ಪಡೆದು ಪಾಟಿಂಟ್ಸ್‌ ಟೇಬಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಗೊಳಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ